ವಿಮಾನದಲ್ಲಿ ಪ್ರಯಾಣಿಸುವವರಿಗೆ ಒಳ್ಳೆ ಸುದ್ದಿಯೊಂದಿದೆ. ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿರುವ ಪ್ರಯಾಣಿಕರಿಗೆ ಟಿಕೆಟ್ ನಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಸಿಗಲಿದೆ. ಏರ್‌ಲೈನ್ ಕಂಪನಿ ಗೋ ಏರ್ ವಿಶೇಷ ಕೊಡುಗೆ ನೀಡುತ್ತಿದೆ. ರಿಯಾಯಿತಿ ದರದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಸಿಗಲಿದೆ.
ಕೊರೊನಾ ಸೋಂಕಿನ ನಂತರ ಆರ್‌ಟಿ-ಪಿಸಿಆರ್‌ನ ವರದಿ ನೀಡುವುದು ಅನಿವಾರ್ಯವಾಗಿದೆ. ನಕಾರಾತ್ಮಕ ವರದಿ ತೋರಿಸಿದ್ರೆ ಮಾತ್ರ ವಿಮಾನದಲ್ಲಿ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ಸರ್ಕಾರ, ಲಸಿಕೆ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿದೆ. ಅನೇಕ ಆಫರ್ ಮೂಲಕ ಲಸಿಕೆಗೆ ಪ್ರೋತ್ಸಾಹ ನೀಡಲಾಗ್ತಿದೆ. ವಿಮಾನಯಾನ ಕಂಪನಿಗಳು ಕೂಡ ಲಸಿಕೆಗೆ ಪ್ರೋತ್ಸಾಹ ನೀಡ್ತಿವೆ. ಈ ಹಿಂದೆ ಇಂಡಿಗೋ ಈ ಆಫರ್ ನೀಡಿತ್ತು.
ಗೋ ವ್ಯಾಕ್ಸಿ ಫೇರ್ ಕೊಡುಗೆಯ ಅಡಿಯಲ್ಲಿ, ಮೂಲ ದರದಲ್ಲಿ ದೇಶೀಯ ವಿಮಾನಗಳಲ್ಲಿ ಲಸಿಕೆ ಪಡೆದ ಪ್ರಯಾಣಿಕರಿಗೆ ಈ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಬುಕ್ಕಿಂಗ್ ಮಾಡಿದ 15 ದಿನಗಳ ನಂತರ ಪ್ರಯಾಣಕ್ಕೆ ವ್ಯಾಕ್ಸಿನೇಷನ್ ರಿಯಾಯಿತಿ ಅನ್ವಯವಾಗುತ್ತದೆ. ಗೋ ಏರ್ ಅಪ್ಲಿಕೇಷನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಗಮ್ಯಸ್ಥಾನ ನಮೂದಿಸಬೇಕು.ಲಸಿಕೆ ಬಗ್ಗೆ ನಮೂದಿಸಬೇಕು. ಬುಕ್ಕಿಂಗ್ ಪೂರ್ಣಗೊಳಿಸಿ ಶುಲ್ಕ ಪಾವತಿ ಮಾಡಬೇಕು. ಚೆಕ್-ಇನ್ ಕೌಂಟರ್ ಅಥವಾ ಬೋರ್ಡಿಂಗ್ ಗೇಟ್‌ನಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ.