ನೀವು ಜಿಮೇಲ್ ಖಾತೆಯನ್ನು ಹೊಂದಿದ್ದರೆ ಈ ಸುದ್ದಿಯನ್ನು ಓದಲೇಬೇಕು. ನೀವು ಹೊಂದಿರುವ ಜಿಮೇಲ್ ಮತ್ತು ಯೂಟ್ಯೂಬ್ ಖಾತೆಯನ್ನು ಎರಡು ವರ್ಷಗಳಿಂದ ಬಳಸದೇ ಇದ್ದಲ್ಲಿ ಅಂತಹ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡಲು ಗೂಗಲ್ ಮುಂದಾಗಿದೆ.
ಸೈಬರ್ ವಂಚನೆಯನ್ನು ತಡೆಯುವ ಸಲುವಾಗಿ ಇಂತಹ ಒಂದು ಮಹತ್ವದ ಕ್ರಮಕ್ಕೆ ಗೂಗಲ್ ಮುಂದಾಗಿದ್ದು, ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಶಾಲೆಗಳು ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಡಿಲೀಟ್ ಮಾಡಲಾಗುತ್ತಿಲ್ಲ.
ಖಾತೆ ಡಿಲೀಟ್ ಮಾಡುವ ಮುನ್ನ ಇದನ್ನು ಹೊಂದಿದವರ ಪ್ರಾಥಮಿಕ ಇಮೇಲ್ ವಿಳಾಸ ಮತ್ತು ರಿಕವರಿ ಇ-ಮೇಲ್ ಗೆ ಮಾಹಿತಿಯನ್ನು ಗೂಗಲ್ ಕಳುಹಿಸಲಿದ್ದು, ಆ ಬಳಿಕ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡುವ ಕಾರ್ಯ ಆರಂಭವಾಗಲಿದೆ.