
ನಿಮ್ಮ ಮುಖದ ಮೇಲೆ ಬಸವನ ಹುಳುಗಳು ತೆವಳುತ್ತಿರುವುದನ್ನು ಅಲೋಚಿಸಿ ನೋಡಿ. ಇದೊಂದು ಅಸಹ್ಯ ಕ್ರಿಯೆ ಎಂದುಕೊಂಡಿರಾ…? ಜಪಾನಿನಲ್ಲಿ ಇದು ಸೌಂದರ್ಯ ವರ್ಧಕ ಟಿಪ್ಸ್ ಎಂದರೆ ನೀವು ನಂಬುತ್ತೀರಾ…?
ಅಲ್ಲಿ ಬಸವನ ಹುಳುವನ್ನು ಮುಖದ ಮೇಲೆ ಹರಿಯಬಿಡುವ ಬ್ಯೂಟಿ ಸ್ಪಾಗಳಿವೆ. ಇವು ಸತ್ತ ಚರ್ಮವನ್ನು ಸ್ವಚ್ಛಗೊಳಿಸುತ್ತವೆ. ನಿಮ್ಮ ವಯಸ್ಸನ್ನು ಕನಿಷ್ಠ ಎರಡು ವರ್ಷ ಹಿಂದೆ ಹಾಕುತ್ತದೆ.
“ಬಸವನ ಹುಳದಿಂದ ಬರುವ ಲೋಳೆ ಹಳೆಯ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಸೂರ್ಯನ ವಿಕಿರಣಗಳಿಗೆ ಸುಟ್ಟ ಚರ್ಮವನ್ನು ಗುಣಪಡಿಸಲು ಮತ್ತು ಅದನ್ನು ತೇವಗೊಳಿಸಲು ಸಹಾಯ ಮಾಡುತ್ತದೆ” ಎಂದು ಟೋಕಿಯೋ ಮೂಲದ ಸೌಂದರ್ಯ ತಜ್ಞರು ವಿವರಿಸುತ್ತಾರೆ.
ಈ ರೀತಿಯಾಗಿ, ನೀವು ಚರ್ಮದ ಮೇಲೆ ನೇರವಾಗಿ 100 ಪ್ರತಿಶತ ಶುದ್ಧ ಬಸವನ ಹುಳುವಿನ ಲೋಳೆಯನ್ನು ಹಚ್ಚಿಕೊಳ್ಳಬಹುದು. ಕೆಲವು ಸೌಂದರ್ಯ ವರ್ಧಕಗಳಲ್ಲಿ ಈಗಾಗಲೇ ಈ ಸಾರವನ್ನು ಬಳಸಿಕೊಳ್ಳಲಾಗಿದೆ.