ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) Global Sustainability Leadership’ ಪ್ರಶಸ್ತಿಗೆ ಭಾಜನವಾಗಿದೆ.
ಕೆಎಸ್ಸಾರ್ಟಿಸಿ ಗೆ World Sustainability Congress ನಿಂದ ನೀಡಲಾಗುವ “Global Sustainability Leadership” ಪ್ರಶಸ್ತಿಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅನುಷ್ಠಾನಗೊಳಿಸಿರುವ ವಾಹನಗಳ ಪುನಶ್ಚೇತನ ಉಪಕ್ರಮಕ್ಕೆ ಲಭಿಸಿದೆ.
ಗುರುವಾರದಂದು ಮಾರಿಷಸ್ನಲ್ಲಿ ನಡೆದ 10ನೇ ಆವೃತ್ತಿಯ ಸಮಾವೇಶದಲ್ಲಿ ಕೆಎಸ್ಸಾರ್ಟಿಸಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಲ್ರ್ಡ್ ಸಸ್ಟೈನ್ಬಿಲಿಟಿ ಕಾಂಗ್ರೆಸ್ ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿದೆ. World Sustainability Congress ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿದ್ದು, ಸುಸ್ಥಿರ ನಾಯಕತ್ವ ಸಂಸ್ಥೆಗಳು, ಎನ್ ಜಿ ಓ ಗಳು, ಸಾರ್ವಜನಿಕ ಹಿತಾಸಕ್ತಿ ಗುಂಪುಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಟ್ಟು ಗೂಡಿಸಿ ಸುಸ್ಥಿರ ಪದ್ಧತಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಪ್ರತಿಷ್ಠಿತ ಸಂಸ್ಥೆಯಾಗಿದೆ.