
ಬೆಂಗಳೂರು: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮೈಲಿಗಲ್ಲಿನ ಸಾಧನೆಯಾಗಿದೆ. 10.25ಲಕ್ಷ ರೂ. ಹೂಡಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, 6 ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿವೆ.
ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದೆ. ನಮ್ಮ ಆರಂಭಿಕ ಗುರಿಯಾದ 7.5ಲಕ್ಷ ಕೋಟಿ ರೂ. ದಾಟಿ, 10.25ಲಕ್ಷ ಕೋಟಿ ರೂ. ಹೂಡಿಕೆಗೆ ಒಪ್ಪಂದವಾಗಿದೆ. ಇದರಲ್ಲಿ ಶೇ. 40ರಿಂದ 50% ರಷ್ಟು ಮೊತ್ತವು ಉತ್ತರ ಕರ್ನಾಟಕಕ್ಕೆ ಲಾಭವಾಗುವಂತೆ ಮಾಡಿದ್ದು, ರಾಜ್ಯದ ಸಮತೋಲಿತ ಬೆಳವಣಿಗೆಯತ್ತ ದೊಡ್ಡ ಹೆಜ್ಜೆಯಾಗಿದೆ. ಈ ಹೂಡಿಕೆಗಳೊಂದಿಗೆ 6ಲಕ್ಷ ಉದ್ಯೋಗಗಳ ಸೃಷ್ಟಿಯಾಗಲಿದೆ. ರಾಜ್ಯದ ಕೈಗಾರಿಕಾ ವಲಯದಲ್ಲಿ ಇಂದಿನಿಂದ ಹೊಸಯುಗ ಪ್ರಾರಂಭವಾಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶ: ಮೈಲಿಗಲ್ಲಿನ ಸಾಧನೆ!
ರೂ. 10.25ಲಕ್ಷ ಹೂಡಿಕೆ ಒಪ್ಪಂದ ; 6 ಲಕ್ಷ ಉದ್ಯೋಗಗಳ ಸೃಷ್ಟಿನಮ್ಮೆಲ್ಲರ ನಿರೀಕ್ಷೆಗೂ ಮೀರಿ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಿದೆ. ನಮ್ಮ ಆರಂಭಿಕ ಗುರಿಯಾದ ರೂ. 7.5ಲಕ್ಷ ಕೋಟಿ ದಾಟಿ, ರೂ. 10.25ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದವಾಗಿದೆ.… pic.twitter.com/Xuc8m8gall
— M B Patil (@MBPatil) February 14, 2025