ಕೊರೊನಾ ಸಾಂಕ್ರಾಮಿಕದ ನಿಗ್ರಹಕ್ಕೆ ವಿಶ್ವಾದ್ಯಂತ ಲಸಿಕೆ ಕಂಡು ಹಿಡಿದಿದ್ದರೂ ಅದರ ರೂಪಾಂತರಿಗಳು ಮಾತ್ರ ಜಗತ್ತನ್ನೇ ಆತಂಕಕ್ಕೆ ದೂಡುತ್ತಿವೆ. ಹಾಗಾಗಿಯೇ ಇಂದು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸೋಂಕಿನ ಐದು, ಆರನೇ ಅಲೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ, ಇತ್ತೀಚೆಗೆ ಚೀನಾ, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದ್ದು, ಭಾರತದಲ್ಲೂ ಶೀಘ್ರವೇ ನಾಲ್ಕನೇ ಅಲೆ ಏಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಭಾರತವು ಓಮಿಕ್ರಾನ್ ರೂಪಾಂತರಿ ರೂಪದಲ್ಲಿ ಈಗಾಗಲೇ ಮೂರನೇ ಅಲೆಯನ್ನು ಎದುರಿಸಿ, ಅದರಿಂದ ಹೊರಬಂದಿದೆ. ಆದರೆ, ಐಐಟಿ ಕಾನ್ಪುರ ವಿಜ್ಞಾನಿಗಳು ನಾಲ್ಕನೇ ಅಲೆ ಕುರಿತು ಎಚ್ಚರಿಸಿದ್ದು, ಆತಂಕ ಮೂಡಿಸಿದೆ. ಜೂನ್ ಮಧ್ಯಭಾಗದಲ್ಲಿ ಭಾರತದಲ್ಲಿ ನಾಲ್ಕನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದು, ಹೆಚ್ಚಿನ ಜನರಲ್ಲಿ ಭೀತಿ ಹುಟ್ಟಿಸಿದೆ. ಭಾರತದಲ್ಲಿ ಸದ್ಯ ನಿತ್ಯ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿದಿದ್ದರೆ, ಮುಂದಿನ ಕೆಲ ದಿನಗಳಲ್ಲಿಯೇ ಹೆಚ್ಚಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.
ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಸಲು ರಮಾನಾಥ್ ರೈ ಮನವಿ
ಅಮೆರಿಕ, ಚೀನಾ, ಬ್ರಿಟನ್, ದಕ್ಷಿಣ ಕೊರಿಯಾ ಹಾಗೂ ಯುರೋಪ್‌ನ ಹಲವು ರಾಷ್ಟ್ರಗಳಲ್ಲಿ ಕೊರೊನಾ ನಿತ್ಯ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ಅದರಲ್ಲೂ, ಚೀನಾದ 20 ಪ್ರಾಂತ್ಯಗಳಲ್ಲಿ ಸಂಚಾರ ನಿಷೇಧ, ಕರ್ಫ್ಯೂ, ಲಾಕ್‌ಡೌನ್ ಸೇರಿ ಹಲವು ರೀತಿಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಹಾಗಾಗಿ, ಭಾರತಕ್ಕೂ ನಾಲ್ಕನೇ ಅಲೆ ಕಾಲಿಡಲಿದೆ ಎನ್ನಲಾಗುತ್ತಿದೆ. ಆದಾಗ್ಯೂ, ಭಾರತದಲ್ಲಿ ಕೊರೊನಾ ಲಸಿಕೆಯ 180 ಕೋಟಿಗೂ ಅಧಿಕ ಡೋಸ್ ನೀಡಲಾಗಿದ್ದು, ನಾಲ್ಕನೇ ಅಲೆ ಬಂದರೂ ಓಮಿಕ್ರಾನ್‌ನಂತೆ ಇದರ ತೀವ್ರತೆಯೂ ಕಡಿಮೆ ಇರಲಿದೆ ಎಂದು ತಿಳಿದುಬಂದಿದೆ.