ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಒಬ್ಬ ವ್ಯಕ್ತಿಗೆ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಆತನ ಹೊಟ್ಟೆಯಿಂದ ಗಾಜಿನ ತುಂಡನ್ನು ಹೊರತೆಗೆದಿದೆ.
ಒಡಿಶಾದ ಬೆರ್ಹಾಂಪುರ ಎಂಕೆಸಿಜಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಗಾಜಿನ ತುಂಡು ರೋಗಿಯ ಹೊಟ್ಟೆಗೆ ಹೇಗೆ ಪ್ರವೇಶಿಸಿತು ಎಂದು ವೈದ್ಯರು ಆಶ್ಚರ್ಯ ಪಡುತ್ತಿದ್ದಾರೆ.
ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸುತ್ತಿದ್ದ, ಆ ವ್ಯಕ್ತಿ ಗುಜರಾತ್ನ ಸೂರತ್ಗೆ ಹೋಗಿ ಅಲ್ಲಿ ಹತ್ತಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ. ಸುಮಾರು 10 ದಿನಗಳ ಹಿಂದೆ ಆತ ತನ್ನ ಸ್ನೇಹಿತರೊಂದಿಗೆ ಮದ್ಯ ಸೇವಿಸಿದ್ದ. ಮದ್ಯ ಸೇವಿಸಿದ ನಂತರ ಅಸಹನೀಯ ನೋವಿನಿಂದ ಸೂರತ್ ತೊರೆದು ತನ್ನ ಹಳ್ಳಿಗೆ ಹೋಗಿದ್ದನು. ಬಳಿಕ ಹೊಟ್ಟೆ ಮತ್ತು ಕಾಲುಗಳು ಊದಿಕೊಳ್ಳಲು ಪ್ರಾರಂಭಿಸಿದವು. ನೋವು ಅಸಹನೀಯವಾಗುತ್ತಿದ್ದಂತೆ, ಅವನು ಬೆರ್ಹಾಂಪುರದ ಆಸ್ಪತ್ರೆ ಸಂಪರ್ಕಿಸಿದ್ದ.
ಎಕ್ಸ್-ರೇ ವರದಿಯ ನಂತರ ಆತನ ಹೊಟ್ಟೆಯೊಳಗೆ ಒಂದು ಗ್ಲಾಸ್ ಕಂಡುಬಂದಿದೆ. ರೋಗಿಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ನಾಲ್ಕು ವರ್ಷಗಳಿಂದ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 55 ವರ್ಷದ ಬಾಂಗ್ಲಾದೇಶದ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಕೆಯ ಹೊಟ್ಟೆಯಲ್ಲಿ ಸುಮಾರು 20 ವರ್ಷಗಳಿಂದ ಕತ್ತರಿ ಬಚ್ಚಿಟ್ಟುಕೊಂಡಿರುವುದು ಕಂಡುಬಂದಿತ್ತು.