ಭಾರತದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಮತ್ತು ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಮೆಚ್ಚುಗೆ ಗಳಿಸಿರುವ ಮಧ್ಯಪ್ರದೇಶದ ’ಇಂದೋರ್’ ನಗರದಲ್ಲಿ ಇನ್ಮುಂದೆ ಹೋಟೆಲ್‌ಗಳು ಕೇವಲ ಅರ್ಧ ಗ್ಲಾಸ್/ಕಪ್ ಮಾತ್ರವೇ ನೀರು ಕೊಡುವ ನಿರ್ಧಾರ ಮಾಡಿವೆ !
ಅಚ್ಚರಿ ಎನಿಸಿದರೂ ಕೂಡ ಇದು ಸತ್ಯ. ಪ್ರಮುಖವಾಗಿ ಕುಡಿಯುವ ನೀರಿನ ಸಂರಕ್ಷಣೆ ಜತೆಗೆ ಕುಡಿಯುವ ನೀರು ವ್ಯರ್ಥ ಆಗುವುದನ್ನು ತಡೆಯಲು ಈ ಕ್ರಮ ಜಾರಿಗೆ ತರಲಾಗುತ್ತಿದೆ.
ನಿಮ್ಮನ್ನು ಬೆರಗಾಗಿಸುತ್ತೆ ಮೌಂಟ್ ಎವರೆಸ್ಟ್ ನ ಈ ರುದ್ರರಮಣೀಯ ದೃಶ್ಯ
’ಜಲಹಾತ್ ಜನ ಅಭಿಯಾನ ’ ಎಂದು ಯೋಜನೆಗೆ ಹೆಸರಿಡಲಾಗಿದ್ದು, ಅರ್ಧ ಗ್ಲಾಸ್ ಕಂಡಾಕ್ಷಣ ಹೋಟೆಲ್ ಗ್ರಾಹಕರಿಗೆ ನೀರಿನ ಮಹತ್ವದ ಅರಿವಾಗಲಿದೆ ಎನ್ನುವುದು ನಗರಾಡಳಿತದ ಚಿಂತನೆಯಾಗಿದೆ. ಇದನ್ನು ಜಾರಿ ಮಾಡಲು ಹೋಟೆಲ್‌ಗಳು ಕೂಡ ಒಪ್ಪಿವೆ.
GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಕುಸಿತ; ಸಾವಿನ ಸಂಖ್ಯೆಯೂ ಇಳಿಕೆ; 24 ಗಂಟೆಯಲ್ಲಿ ಪತ್ತೆಯಾದ ಕೋವಿಡ್ ಸೋಂಕಿತರೆಷ್ಟು…? ಇಲ್ಲಿದೆ ವಿವರ
ಕೆರೆ, ಬಾವಿ, ಬೋರ್‌ವೆಲ್, ನದಿಗಳಂತಹ ನೀರಿನ ಮೂಲಗಳ ಇತಿಮಿತಿಯ ಬಳಕೆಯ ಬಗ್ಗೆ ಜನರಲ್ಲಿ ಸದಾಕಾಲ ಎಚ್ಚರವಿರಬೇಕು. ಅವರಿಗೆ ಅರ್ಧ ಗ್ಲಾಸ್ ಕುಡಿಯುವ ನೀರು ಮಾತ್ರವೇ ಸಿಗುವಂತಹ ಪರಿಸ್ಥಿತಿ ಮುಂದೆ ಎದುರಾಗಬಹುದು ಎಂಬ ಮುನ್ನೆಚ್ಚರಿಕೆ ಕೂಡ ಇರಬೇಕಾಗುತ್ತದೆ. ಆಗ ಮಿತವ್ಯಯದ ಜತೆಗೆ ನೀರಿನ ಪೋಲು ತಡೆಯಬಹುದು ಎಂದು ಓಜಸ್ ಪ್ರತಿಷ್ಠಾನ ನೇತೃತ್ವ ವಹಿಸಿರುವ ಜಲಹಾತ್ ಅಭಿಯಾನಕ್ಕೆ ಚಾಲನೆ ನೀಡಿದ ಮಧ್ಯಪ್ರದೇಶ ಜಲಸಂಪನ್ಮೂಲ ಸಚಿವ ತುಳಸಿ ರಾಮ್ ಸಿಲಾವತ್ ಹೇಳಿದ್ದಾರೆ.
ಸತತ 20 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿಯಿಂದ ಅ.7ರಂದು ಸಂಭ್ರಮಾಚರಣೆ
ಉತ್ತರಪ್ರದೇಶದಲ್ಲಿ ಇದೇ ಮಾದರಿ ಅರ್ಧ ಗ್ಲಾಸ್ ನೀರಿನ ಯೋಜನೆ ಜಾರಿಗೆ ಈ ಮುಂಚೆ ಚಿಂತಿಸಲಾಗಿತ್ತು.