ಬೆಂಗಳೂರು: ಡಾಬಾ ಸಮೀಪ ನಿಲ್ಲಿಸಿದ್ದ ಕಾರ್ ನ ಗ್ಲಾಸ್ ಒಡೆದು ಲ್ಯಾಪ್ಟಾಪ್ ಸೇರಿದಂತೆ ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಘಟನೆ ನಡೆದಿದೆ. 3,000 ರೂ. ನಗದು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಿನ್ನದ ಓಲೆ ಸೇರಿದಂತೆ ಮೂರು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಲಾಗಿದೆ. ಹಾವೇರಿಗೆ ಹೊರಟಿದ್ದ ಟೆಕ್ಕಿ ರಾಜು, ಪತ್ನಿ ಮತ್ತು ಮಗಳು ಡಾಬಾ ಸಮೀಪ ಕಾರ್ ನಿಲ್ಲಿಸಿದ್ದ ವೇಳೆ ಗ್ಲಾಸ್ ಒಡೆದು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ನೆಲಮಂಗಲ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.