
‘ಉಪಾಧ್ಯಕ್ಷ’ ಸಿನಿಮಾ ನಾಯಕಿ ಮಲೈಕಾ ವಾಸುಪಾಲ್ ಸಾಮಾಜಿಕ ಜಾಣತನದಲ್ಲಿ ಫುಲ್ ಆಕ್ಟಿವ್ ಆಗಿರುತ್ತಾರೆ. ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಮಲೈಕಾ ವಾಸು ಪಾಲ್ ಇತ್ತೀಚಿಗಷ್ಟೇ ಫೋಟೋ ಶೂಟ್ ಮಾಡಿಸಿದ್ದು, ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಕ್ಯೂಟ್, ಗಾರ್ಜಿಯಸ್, ಬ್ಯೂಟಿಫುಲ್ ಹೀಗೆ ಹಲವಾರು ಕಮೆಂಟ್ಸ್ ಗಳು ಬಂದಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಮೂಲಕ ಚಿರಪರಿಚಿತರಾದ ಮಲೈಕಾ ವಾಸುಪಾಲ್ ಇತ್ತೀಚೆಗೆ ಹಾಸ್ಯ ಕಲಾವಿದ ಚಿಕ್ಕಣ್ಣ ಜೊತೆ ಉಪಾಧ್ಯಕ್ಷ ಸಿನಿಮಾದಲ್ಲಿ ಅಭಿನಯಿಸಿದ್ದರು. ಜನವರಿ 26ರಂದು ರಾಜ್ಯದ್ಯಂತ ತೆರೆ ಕಂಡಿದ್ದ ಈ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.


