
ನಮ್ಮ ಆಹಾರ ಪದ್ಧತಿಯು ದೇಹದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಮಕ್ಕಳು ಕುಳ್ಳಗಿರುತ್ತಾರೆ, ಎಷ್ಟೇ ಕಸರತ್ತು ಮಾಡಿದರೂ ಅವರ ಹೈಟ್ ಜಾಸ್ತಿಯಾಗುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಈ ರೀತಿ ಆಗುವುದು ಮಕ್ಕಳು ಸೇವಿಸುವ ಆಹಾರಗಳಿಂದ. ಮಕ್ಕಳ ಎತ್ತರವನ್ನು ಹೆಚ್ಚಿಸಲು ಕೆಲವು ನಿರ್ದಿಷ್ಟ ಆಹಾರವನ್ನು ನೀಡಬೇಕು. ಏಕೆಂದರೆ ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ.
ಹಾಲು – ಮಕ್ಕಳ ಎತ್ತರ ಹೆಚ್ಚಾಗಬೇಕೆಂದರೆ ಅವರಿಗೆ ನಿಯಮಿತವಾಗಿ ಹಾಲು ಕೊಡಿ. ಹಾಲು ಕುಡಿಯುವುದರಿಂದ ಮಕ್ಕಳ ಎತ್ತರ ಬೇಗನೆ ಹೆಚ್ಚಾಗುತ್ತದೆ, ಇದು ದೇಹವನ್ನು ಕೂಡ ಬಲಪಡಿಸುತ್ತದೆ.
ಮೊಟ್ಟೆ– ದೇಹವನ್ನು ಸದೃಢವಾಗಿಡಲು ಮೊಟ್ಟೆ ತುಂಬಾ ಪ್ರಯೋಜನಕಾರಿ. ಅದನ್ನು ಮಕ್ಕಳ ಆಹಾರದಲ್ಲಿ ಸೇರಿಸಬೇಕು. ಮೊಟ್ಟೆ ಸೇವನೆಯಿಂದ ಮಕ್ಕಳ ಹೈಟ್ ಕೂಡ ಬಹುಬೇಗ ಹೆಚ್ಚಾಗುತ್ತದೆ.
ಕ್ಯಾರೆಟ್ – ಮಕ್ಕಳು ಪ್ರತಿದಿನ ಕ್ಯಾರೆಟ್ ತಿನ್ನಬೇಕು. ಏಕೆಂದರೆ ಕ್ಯಾರೆಟ್‌ನಲ್ಲಿ ವಿಟಮಿನ್‌ಗಳು ಸಮೃದ್ಧವಾಗಿದೆ. ಮೂಳೆಗಳ ತ್ವರಿತ ಬೆಳವಣಿಗೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಸೋಯಾಬೀನ್ – ಸೋಯಾಬೀನ್ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಹೊಂದಿರುತ್ತದೆ. ಇದು ಎತ್ತರವನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ.
ಬೀನ್ಸ್ – ಬೀನ್ಸ್ ನಮ್ಮ ದೇಹವನ್ನು ಬಲಪಡಿಸುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ. ಬೀನ್ಸ್‌ನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ಕಬ್ಬಿಣದ ಅಂಶಗಳಿರುತ್ತವೆ. ಹಾಗಾಗಿ ಬೀನ್ಸ್ ತಿನ್ನುವುದರಿಂದ ಮಕ್ಕಳ ಎತ್ತರ ಹೆಚ್ಚಾಗುತ್ತದೆ.