ದಾರಿ ತಪ್ಪಿದ ನಾಯಿಗಳು ಇನ್ನು ಮುಂದೆ ವಿಶೇಷವಾದ ಸಾಧನ ಬಳಸುವ ಮೂಲಕ ತಮ್ಮ ಮಾಲೀಕರಿಗೆ ಕರೆ ಮಾಡುವ ಸಾಧ್ಯತೆ ಶೀಘ್ರದಲ್ಲೇ ವಾಸ್ತವವಾಗಲಿದೆ.
ಬ್ರಿಟನ್ ಹಾಗೂ ಫಿನ್ಲೆಂಡ್‌ನ ವಿಜ್ಞಾನಿಗಳು ಅನ್ವೇಷಣೆ ಮಾಡಿದ ಡಾಗ್ ಫೋನ್ ಹೆಸರಿನ ಸಾಧನವು ಆಕ್ಸಿಲರೋಮೀಟರ್ ಅಳವಡಿಸಿದ ಚೆಂಡೊಂದನ್ನು ನಾಯಿ ಅಲ್ಲಾಡಿಸಿದ ಕೂಡಲೇ ಕೆಲಸ ಶುರು ಮಾಡಿ, ಹತ್ತಿರದಲ್ಲಿರುವ ಲ್ಯಾಪ್ಟಾಪ್ ಒಂದರ ಮೂಲಕ ತನ್ನ ಮಾಲೀಕರಿಗೆ ವಿಡಿಯೋ ಕಾಲ್ ಮಾಡುವಂತೆ ಮಾಡುತ್ತದೆ.
ಗ್ಲಾಸ್ಗೋ ವಿವಿಯ ಇಲ್ಯೇನಾ ಹರ್ಸ್ಕಿ ಡಗ್ಲಾಸ್ ತಮ್ಮ ಸಾಕುನಾಯಿಯಾದ ಜ಼ಾಕ್ ಹೆಸರಿನ ಲ್ಯಾಬ್ರಡಾರ್ ಶ್ವಾನದ ಸಹಾಯದಿಂದ ಈ ಅನ್ವೇಷಣೆ ಮಾಡಿದ್ದಾರೆ. ಇಲ್ಯೇನಾಗೆ ಫಿನ್ಲೆಂಡ್‌ನ ಆಲ್ಟೋ ವಿವಿಯ ಸಹೋದ್ಯೋಗಿಗಳು ನೆರವಾಗಿದ್ದಾರೆ.
ಶುಭ ಸುದ್ದಿ: ಪ್ರಾಥಮಿಕ ಶಾಲೆ, ಪ್ರೌಢಶಾಲೆಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ
16 ದಿನಗಳ ಕಾಲ ಜ಼ಾಕ್‌ಗೆ ಈ ಆಟಿಕೆಯನ್ನು ಪರಿಚಯ ಮಾಡಿಕೊಳ್ಳಲು ನೀಡಲಾಗಿದೆ. ನೋಡ ನೋಡುತ್ತಲೇ ಜ಼ಾಕ್ ತನಗೆ ನೀಡಿದ ಹೊಸ ಡಿವೈಸ್‌ನಿಂದ ತನ್ನ ಮಾಲೀಕರಿಗೆ ಕರೆ ಮಾಡಲು ಸಫಲನಾಗಿದ್ದಾನೆ.
ಪ್ರಾಣಿ -ಕಂಪ್ಯೂಟರ್ ಸಂವಹನದ ತಜ್ಞೆಯಾದ ಇಲ್ಯೇನಾ, ಜ಼ಾಕ್‌ನ ಕರೆಗೆ ಸ್ಪಂದಿಸಿ ತಮ್ಮ ಕಚೇರಿಯ ದಾರಿ ತೋರಲು ಸಫಲರಾಗಿದ್ದಾರೆ.
ಇನ್ನಷ್ಟು ಪ್ರಯೋಗಗಳಿಗೆ ಒಳಗಾಗುತ್ತಿರುವ ಡಾಗ್‌ಫೋನ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.