ಮನೆ ಅಂದ ಮೇಲೆ ಕಿಟಕಿ ಇರಲೇಬೇಕು. ಕಿಟಕಿಯನ್ನು ನೀವು ಕೇವಲ ಮನೆಯ ಅಂದದ ರೀತಿಯಿಂದ ಮಾತ್ರ ನೋಡಬಾರದು. ಮನೆಯ ಕಿಟಕಿಗೂ ವಾಸ್ತು ಶಾಸ್ತ್ರದ ಪ್ರಕಾರ ಅದರದ್ದೇ ಆದ ನಿಯಮಗಳು ಇವೆ.
ಸಾಮಾನ್ಯವಾಗಿ ಕಿಟಕಿಗಳನ್ನು ಪೂರ್ವ ದಿಕ್ಕಿನಲ್ಲಿಯೇ ನಿರ್ಮಿಸಿ ಎಂದು ಹೇಳುತ್ತಾರೆ. ಕಿಟಕಿಗೂ ಪೂರ್ವ ದಿಕ್ಕಿಗೂ ಏನು ಸಂಬಂಧ …? ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ವಾಸ್ತು ಶಾಸ್ತ್ರದ ಪ್ರಕಾರ, ಕಿಟಕಿ ನಿರ್ಮಾಣ ಮಾಡೋಕೆ ಪೂರ್ವ ದಿಕ್ಕು ಅತ್ಯಂತ ಪ್ರಾಶಸ್ತ್ಯವಾದ ದಿಕ್ಕಾಗಿದೆ. ಪೂರ್ವ ದಿಕ್ಕಿನಲ್ಲಿ ಮನೆ ಅಥವಾ ಕಚೇರಿಯ ಕಿಟಕಿಯನ್ನು ನಿರ್ಮಿಸೋದರಿಂದ ನಿಮ್ಮ ಮನೆಗೆ ಸೂರ್ಯ ದೇವನ ಆಶೀರ್ವಾದ ಸದಾ ಕಾಲ ಇರಲಿದೆ.
ಪೂರ್ವ ದಿಕ್ಕಿನಲ್ಲಿ ಕಿಟಕಿ ನಿರ್ಮಾಣ ಮಾಡೋದ್ರಿಂದ ಸೂರ್ಯನ ಮೊದಲ ಕಿರಣವು ಕಿಟಕಿ ಮೂಲಕ ನಿಮ್ಮ ಮನೆಯನ್ನು ಪ್ರವೇಶಿಸುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ. ಮಾತ್ರವಲ್ಲದೇ ಕುಟುಂಬಸ್ಥರ ಆರೋಗ್ಯವೂ ಸರಿಯಾಗಿ ಇರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.