ಅಮರಾವತಿ: ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ 70 ರೂಪಾಯಿಗೆ ಮದ್ಯ ಕೊಡಲಾಗುತ್ತದೆ. ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಲಾಗಿದೆ.
ಅದರಲ್ಲಿಯೂ ಲಾಭ ಬಂದರೆ ಕೇವಲ 50 ರೂಪಾಯಿ ಕೊಡುತ್ತೇವೆ ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಹೇಳಿಕೆ ನೀಡಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ ಕೇವಲ 70 ರೂಪಾಯಿಗೆ ಮದ್ಯ ನೀಡುವುದಾಗಿ ಘೋಷಣೆ ಮಾಡಿದ್ದಾರೆ.