ಡಾರ್ಕ್ ಸರ್ಕಲ್ ಅಥವಾ ಕಣ್ಣ ಸುತ್ತಲಿನ ಕಪ್ಪು ಕಲೆಯ ಈ ಸಮಸ್ಯೆ ಮುಖದ ಅಂದವನ್ನು ಕೆಡಿಸುತ್ತದೆ. ಸಾಮಾನ್ಯವಾಗಿ ಸರಿಯಾಗಿ ನಿದ್ದೆ ಇಲ್ಲದಿರುವುದು, ತುಂಬಾ ಹೊತ್ತು ಬಿಸಿಲಿನಲ್ಲಿರುವುದು, ಅಲರ್ಜಿ ಇವುಗಳಿಂದ ಡಾರ್ಕ್ ಸರ್ಕಲ್ ಉಂಟಾಗುತ್ತದೆ.
ಕಪ್ಪು ಕಲೆಯನ್ನು ಮರೆಮಾಚಲು ವಿವಿಧ ರೀತಿಯ ಕ್ರೀಂಗಳನ್ನು ಬಳಸಬಹುದು, ಆದರೆ ಅವುಗಳು ಸಂಪೂರ್ಣವಾಗಿ ಗುಣಪಡಿಸಲಾರವು. ಹಾಗಾಗಿ ಡಾರ್ಕ್ ಸರ್ಕಲ್ ನಿವಾರಿಸಲು ಹಾಲಿನ ಆರೈಕೆ ನೀಡಿ.
ಹಾಲು ಮತ್ತು ರೋಸ್ ವಾಟರ್ : ರೋಸ್ ವಾಟರ್ ನಲ್ಲಿ ಆ್ಯಂಟಿ ಸೆಪ್ಟಿಕ್ ಮತ್ತು ಆ್ಯಂಟಿ ಬ್ಯಾಕ್ಟಿರಿಯಲ್ ಗುಣವಿರುವುದರಿಂದ ಕಣ್ಣ ಸುತ್ತ ಕೆಂಪಾಗುವುದು, ಊತ ಬರುವುದು ಇಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತಂಪಾದ ಹಾಲು ಮತ್ತು ರೋಸ್ ವಾಟರ್ ಅನ್ನು ಸಮ ಪ್ರಮಾಣದಲ್ಲಿ ಮಿಕ್ಸ್ ಮಾಡಿ . ಕಾಟನ್ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ 20 ನಿಮಿಷದವರೆಗೆ ಕಣ್ಣ ಮೇಲಿಡಿ. ಇದನ್ನು ವಾರಕ್ಕೆ 2-3 ಬಾರಿ ಮಾಡಿ.
ಹಾಲು ಮತ್ತು ಬಾದಾಮಿ : ಒಂದು ಮುಷ್ಠಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ನೆನೆಸಿದ ಬಾದಾಮಿಯ ಪೇಸ್ಟ್ ತಯಾರಿಸಿ. ಇದಕ್ಕೆ ಸ್ವಲ್ಪ ಹಾಲು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ ಕಣ್ಣ ಸುತ್ತಲು, ಹಾಗೆ ಮುಖಕ್ಕೆ ಕೂಡ ಹಚ್ಚಿ. ಸ್ವಲ್ಪ ಸಮಯದ ನಂತರ ತಂಪಾದ ನೀರಿನಿಂದ ಮುಖ ತೊಳೆಯಿರಿ.
ಹಾಲು ಮತ್ತು ಜೇನು : ಜೇನಿನಲ್ಲಿ ತ್ವಚೆಯನ್ನು ಹೈಡ್ರೇಟ್ ಹಾಗೆ ಮಾಯಿಶ್ಚರ್ ಮಾಡುವ ಗುಣವಿದೆ. ಹಾಲನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಜೇನನ್ನು ಸೇರಿಸಿ. ಇದನ್ನು ಕಣ್ಣ ಕೆಳಗಿನ ಕಲೆಗೆ ಹಚ್ಚಿ 15 ನಿಮಿಷ ಹಾಗೆ ಬಿಡಿ, ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ 2-3 ಬಾರಿ ಮಾಡಿ.
ಹಾಲು, ಸವತೆಕಾಯಿ ಮತ್ತು ನಿಂಬೆ ರಸ : ಒಂದು ಚಮಚ ಹಾಲು, ಒಂದು ಚಮಚ ಸವತೆಕಾಯಿ ರಸವನ್ನು ಸೇರಿಸಿ ಕಾಟನ್ ಬಾಲ್ ಸಹಾಯದಿಂದ ಕಣ್ಣಿನ ಕೆಲ ಭಾಗಕ್ಕೆ ಹಚ್ಚಿ. ಇದರಿಂದ ಕಪ್ಪು ಕಲೆ ನಿವಾರಣೆಯಾಗುವುದರ ಜೊತೆಗೆ ತ್ವಚೆಗೆ ಪೋಷಣೆ ಸಿಗುತ್ತದೆ.