ಬೆಂಗಳೂರು: ಗೀತಂ ವಿಶ್ವವಿದ್ಯಾಲಯದ ಹಾಸ್ಟೇಲ್ ನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣ ಸಂಬಂಧ 7 ಜನರ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇವನಹಳ್ಳಿ ಬಳಿಯ ಗೀತಂ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಆಂಧ್ರಪ್ರದೇಶ ಮೂಲದ ದಾಸರಿ ಬ್ರಹ್ಮಸಾಯಿ ರೆಡ್ಡಿ ಹಾಸ್ಟೇಲ್ ನ 6ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದ. ಪ್ರಕರಣ ಸಂಬಧ ಗೀತಂ ವಿವಿ ಉಪಕುಲಪತಿ ಆಚಾರ್ಯ, ಗುತ್ತಿಗೆದಾರ ಮುನಿಕೃಷ್ಣ, ಸೆಕ್ಯೂರಿಟಿ ಇನ್ ಚಾರ್ಜ್ ವಿಜಯ್ ಗಜ್ಜಿ, ವಿವಿ ಅಧ್ಯಕ್ಷ ಭರತ್ ಸೇರಿದಂತೆ 7 ಜನರ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಮೃತ ವಿದ್ಯಾರ್ಥಿ ತಂದೆ ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಕೇಸ್ ದಾಖಲಾಗಿದೆ. ಮುಂಜಾಗೃತಾ ಕ್ರಮ ವಹಿಸದೇ ಹಾಸ್ಟೇಲ್ ಕಟ್ಟಡ ಕಾಮಗಾರಿ ನಡೆಸಿದ್ದು, ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂದು ಆರೋಪಿಸಲಾಗಿದೆ.