ಬೆಂಗಳೂರು: ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳ ಕಲಿಕಾ ಪ್ರಗತಿ, ಬೆಳವಣಿಗೆ ಕುರಿತು ದೂರವಾಣಿ ಕರೆ ಮೂಲಕ ಪೋಷಕರಿಗೆ ವಾರಕ್ಕೊಮ್ಮೆ ಮಾಹಿತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
ಪೋಷಕರು ತಮ್ಮ ಮೊಬೈಲ್ನಲ್ಲಿ 80471 90143 ನಂಬರ್ ಅನ್ನು ಸೇವ್ ಮಾಡಿಕೊಳ್ಳಬೇಕು. ಈ ನಂಬರ್ನಿಂದ ಕರೆ ಬರಲಿದ್ದು, ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.