ಫಾಸ್ಟ್ ಫುಡ್ ಅಂದ್ರೆ ಯಾರಿಗೆ ಇಷ್ಟ ಇಲ್ಲ. ಪಾಸ್ತಾ, ಪಿಜ್ಜಾ, ಬರ್ಗರ್, ನೂಡಲ್ಸ್ ಹೆಸರು ಹೇಳಿದ್ರೆ ಬಾಯಲ್ಲಿ ನೀರು ಬರುತ್ತೆ ಅನ್ನೋರು ಸಾಕಷ್ಟು ಮಂದಿ ನಮ್ಮಲ್ಲಿದ್ದಾರೆ. ಆದ್ರೆ ಈ ಫಾಸ್ಟ್ ಫುಡ್ ಮಹಿಳೆಯರಿಗೆ ಅಪಾಯಕಾರಿ.
ಫಾಸ್ಟ್ ಫುಡ್ ಬಂಜೆತನಕ್ಕೆ ಮೂಲ ಕಾರಣ ಎಂದು ತಜ್ಞರ ಅಭಿಪ್ರಾಯ, ಫಾಸ್ಟ್ ಫುಡ್ ಸೇವನೆ ಹಾಗೂ ಟಿವಿ ಗೆ ಅಂಟಿಕೊಂಡಿರುವುದರಿಂದ ಮಹಿಳೆಯ ತೂಕ ಹೆಚ್ಚಾಗುತ್ತದೆ. ಇದು ನಾನಾ ಸಮಸ್ಯೆಗಳ ಜೊತೆಗೆ ಬಂಜೆತನಕ್ಕೆ ಕಾರಣವಾಗುತ್ತದೆಯಂತೆ.
ಆರೋಗ್ಯಕರ ಆಹಾರ ಸೇವನೆ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಸ್ಥೂಲಕಾಯ ಪಡೆಯುವ ಜನರು ಸಂಧಿವಾತ, ಅಧಿಕ ರಕ್ತದೊತ್ತಡ, ಮಧುಮೇಹ, ಉಸಿರಾಟ ಸಂಬಂಧಿ ಕಾಯಿಲೆ, ಹೃದಯಾಘಾತ, ನಿದ್ರಾ ಹೀನತೆಯಿಂದ ಬಳಲುತ್ತಾರೆ. ಬಂಜೆತನ ಪ್ರಮಾಣ ಕೂಡ ಜಾಸ್ತಿಯಾಗ್ತಾ ಇದೆಯಂತೆ. ಅನಿಯಮಿತ ಮುಟ್ಟಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಂತರ ಮುಟ್ಟು ನಿಂತು ಹೋಗುತ್ತದೆ. ಇದರಿಂದ ಅಂಡಾಣುಗಳ ಉತ್ಪತ್ತಿಯಾಗುವುದಿಲ್ಲ. ಅನಿಯಮಿತ ಮುಟ್ಟು ಆರಂಭದಲ್ಲಿರುವಾಗಲೇ ಚಿಕಿತ್ಸೆ ಪಡೆಯಬೇಕೆಂದು ತಜ್ಞರು ಸಲಹೆ ನೀಡುತ್ತಾರೆ.
ಚಿಕ್ಕವರಿರುವಾಗಲೆ ಬಾಲಕಿಯರಿಗೆ ಜೀವನ ಶೈಲಿ ಹಾಗೂ ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಿದರೆ ಮುಂದಾಗುವ ಸಮಸ್ಯೆಗಳನ್ನು ತಪ್ಪಿಸಬಹುದು ಎನ್ನುತ್ತಾರೆ ತಜ್ಞರು.