ಜಿಂಬಾಬ್ವೆಯಲ್ಲಿ ಕೊರೊನಾ ರೋಗದ ಮಧ್ಯೆ ಸಣ್ಣ ವಯಸ್ಸಿನಲ್ಲಿ ಗರ್ಭ ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ಈ ದೇಶದಲ್ಲಿ ಮದುವೆಗೆ ಕಾನೂನುಬದ್ಧ ವಯಸ್ಸಿಲ್ಲ. ಹಾಗಾಗಿ ಇಲ್ಲಿ ಶಾರೀರಿಕ ಸಂಬಂಧ ಸಾಮಾನ್ಯವಾಗಿದೆ. ಕೊರೊನಾದಿಂದ ಶಾಲೆಗಳು ಮುಚ್ಚಿದ್ದು, ಈ ಸಮಸ್ಯೆ ಉಲ್ಬಣಿಸಿದೆ.
ಜಿಂಬಾಬ್ವೆಯಲ್ಲಿ ಮದುವೆಗೆ ಎರಡು ಕಾನೂನಿದೆ. ಒಂದು ವಿವಾಹ ಕಾಯಿದೆ ಮತ್ತು ಇನ್ನೊಂದು ಸಾಂಪ್ರದಾಯಿಕ ವಿವಾಹ ಕಾಯಿದೆ. ಆದ್ರೆ ಎರಡೂ ಕಾನೂನಿನಲ್ಲಿ ಮದುವೆಗೆ ಕನಿಷ್ಠ ವಯಸ್ಸಿನ ಮಿತಿಯಿಲ್ಲ. ಸಾಂಪ್ರದಾಯಿಕ ವಿವಾಹ ಕಾಯಿದೆಯು ಬಹುಪತ್ನಿತ್ವವನ್ನು ಅನುಮತಿಸುತ್ತದೆ.
ಕೊರೊನಾದಿಂದಾಗಿ ಮಕ್ಕಳು ಶಾಲೆಗೆ ಹೋಗ್ತಿಲ್ಲ. 1.5 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶವು ಮಾರ್ಚ್, 2020 ರಿಂದ ಲಾಕ್‌ಡೌನ್ ನಲ್ಲಿದೆ. ಮೊದಲ 6 ತಿಂಗಳ ಕಾಲ ಶಾಲೆಗಳು ಸಂಪೂರ್ಣ ಬಂದ್ ಆಗಿದ್ದು, ನಂತರ ಮಧ್ಯಂತರದಲ್ಲಿ ಶಾಲೆಗಳನ್ನು ತೆರೆಯಲಾಗಿತ್ತು.
ಆಗಸ್ಟ್ 2020 ರಲ್ಲಿ, ಸರ್ಕಾರ ಕಾನೂನನ್ನು ಬದಲಾಯಿಸಿತ್ತು. ಗರ್ಭಿಣಿ ಬಾಲಕಿಯರು ಶಾಲೆಗೆ ಬರದಂತೆ ನಿಷೇಧಿಸಿತ್ತು. ನಂತ್ರ ಮತ್ತೆ ಕಾನೂನು ಬದಲಿಸಿತ್ತು. ಆದ್ರೆ ಆಗ್ಲೂ ಬಾಲಕಿಯರು ಶಾಲೆಗೆ ಬರಲಿಲ್ಲ.
ಜಿಂಬಾಬ್ವೆಯಲ್ಲಿ, ಸುಮಾರು ಮೂರನೇ ಒಂದು ಭಾಗದಷ್ಟು ಹುಡುಗಿಯರು 18 ವರ್ಷಕ್ಕಿಂತ ಮುಂಚೆಯೇ ಮದುವೆಯಾಗುತ್ತಾರೆ. ಶೇಕಡಾ 4 ರಷ್ಟು ಹುಡುಗಿಯರು 15 ವರ್ಷಕ್ಕಿಂತ ಮುಂಚೆಯೇ ಮದುವೆಯಾಗುತ್ತಾರೆ.