alex Certify 5 ಬಾರಿ ವಿಫಲವಾದರೂ ಛಲ ಬಿಡದ UPSC ಆಕಾಂಕ್ಷಿ; ಮನಬಿಚ್ಚಿ ಮಾತನಾಡಿದ ಅಭ್ಯರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

5 ಬಾರಿ ವಿಫಲವಾದರೂ ಛಲ ಬಿಡದ UPSC ಆಕಾಂಕ್ಷಿ; ಮನಬಿಚ್ಚಿ ಮಾತನಾಡಿದ ಅಭ್ಯರ್ಥಿ

ಯು.ಪಿ.ಎಸ್.​ಸಿ. ಪರೀಕ್ಷೆಗೆ ತಯಾರಿ ನಡೆಸಲು ದೇಶಾದ್ಯಂತದಿಂದ ಆಕಾಂಕ್ಷಿಗಳು ದೆಹಲಿಗೆ ಬರುತ್ತಾರೆ. ಈ ಪರೀಕ್ಷೆಗಳು ತುಂಬಾ ಕಷ್ಟಕರವಾಗಿರುತ್ತವೆ ಮತ್ತು ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಗುರಿ ಮುಟ್ಟಬಹುದು ಎಂದು ಹೇಳಬೇಕಾಗಿಲ್ಲ. ಈ ಪ್ರಯತ್ನ ಒಂದು ಹೋರಾಟವೇ ಸರಿ. ಅಂತಹ ಒಂದು ಹೋರಾಟದ ಕಥೆಯು ಯೂಟ್ಯೂಬ್​ನಲ್ಲಿ ಕಾಣಿಸಿಕೊಂಡಿದೆ.

ಇದರಲ್ಲಿ ಒಬ್ಬ ಐಎಎಸ್​ ಆಕಾಂಕ್ಷಿ ತನ್ನ ಹೋರಾಟ ಮತ್ತು ಈ ಬಾರಿಯೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅನುಭವವನ್ನು ವಿವರಿಸುತ್ತಿದ್ದಾನೆ.

ಕಳೆದ 11 ವರ್ಷಗಳಲ್ಲಿ ತಾನು 5 ಬಾರಿ ಯು.ಪಿ.ಎಸ್.​ಸಿ. ಪರೀಕ್ಷೆಗೆ ಕುಳಿತಿದ್ದೇನೆ, ಆದರೆ ತಾನು ಆಯ್ಕೆಯಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನಂತರ, ತನಗೂ ಒಬ್ಬಳು ಗೆಳತಿ ಇದ್ದಳು, ಅವಳು ಈಗ ಐಎಎಸ್​ ಅಧಿಕಾರಿಯಾಗಿದ್ದಾಳೆ. ಅಂದಿನಿಂದ ನನ್ನನ್ನು ಸಂಪರ್ಕಿಸಿಲ್ಲ. ಆ ಗೆಳತಿ ಆಫೀಸರ್​ ಆದ ಕೂಡಲೇ ನಂಬರ್​ ಕೂಡ ಬದಲಾಯಿಸಿಕೊಂಡಳು ಎಂದು ಬೇಸರ ಕಥನವನ್ನೂ ಹಂಚಿಕೊಂಡರು.

ಅವರ ಹೆಸರು ಹರೇಂದ್ರ ಪಾಂಡೆ, ಬಿಹಾರದ ಗೋಪಾಲ್ಗಂಜ್​ ನಿವಾಸಿಯಾಗಿದ್ದು, 11 ವರ್ಷಗಳಲ್ಲಿ 5 ಬಾರಿ ಯುಪಿಎಸ್ಸಿ ತೆಗೆದುಕೊಂಡಿದ್ದಾರೆ. ಅವರು 4 ಬಾರಿ ಉತ್ತಮ ಪ್ರದರ್ಶನ ನೀಡಿದರು. ಆದರೆ ಅದೃಷ್ಟ ಅವರನ್ನು ಬೆಂಬಲಿಸಲಿಲ್ಲ.

2011ರಲ್ಲಿ ಯುಪಿಎಸ್ಸಿಗೆ ತಯಾರಿ ನಡೆಸಲು ದೆಹಲಿಗೆ ಬಂದಿರುವುದಾಗಿ ಹರೇಂದ್ರ ಯೂಟ್ಯೂಬರ್​ಗೆ ತಿಳಿಸಿದ್ದಾರೆ. ತಯಾರಿಯ ಸಮಯದಲ್ಲಿ ಮಾಡಿದ ತಪ್ಪುಗಳನ್ನು ಸಹ ಅವರು ಒಪ್ಪಿಕೊಂಡರು. ನೆಟ್ಟಿಗರು ಹರೇಂದ್ರ ಅವರ ಬಲವಾದ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆಯನ್ನು ಹೊಗಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...