ಹಚ್ಚೆ ಈಗ ಫ್ಯಾಷನ್. ಜನರು ತಮಗಿಷ್ಟವಾದ ಹಚ್ಚೆಯನ್ನು ಹಾಕಿಕೊಳ್ತಾರೆ. ಪ್ರೇಮಿಗಳು ತಮ್ಮ ಸಂಗಾತಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಹಚ್ಚೆ ಹಾಕಿದ ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ ಆದ್ರೆ ? ಅದೂ ಇಡೀ ಬೆನ್ನಿಗೆ ಹಾಕಿಕೊಂಡಾಗ ಏನು ಮಾಡೋದು ಎಂಬ ಪ್ರಶ್ನೆ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ತನ್ನ ಸಮಸ್ಯೆ ಹಂಚಿಕೊಂಡಿದ್ದಾಳೆ.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, 21 ವರ್ಷದ ಆಶ್ಲೀನ್ ಗ್ರೇನ್, ತನ್ನ ಪ್ರೇಮಿ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಳಂತೆ. ಟಿಕ್ ಟಾಕ್ ನಲ್ಲಿ ಈ ಸಂಗತಿಯನ್ನು ಆಶ್ಲೀನ್ ಹಂಚಿಕೊಂಡಿದ್ದಾಳೆ. ಎರಡು ವಿಡಿಯೋ ಹಂಚಿಕೊಂಡಿರುವ ಆಶ್ಲೀನ್, ಈ ಪಶ್ಚಾತಾಪ ಪಡುತ್ತಿದ್ದೇನೆ ಎಂದಿದ್ದಾಳೆ. ಆಕೆ ಬಾಯ್ ಪ್ರೆಂಡ್ ಹೆಸರು Alexander. ಕತ್ತಿನಿಂದ ಸೊಂಟದವರೆಗೆ ಈ ಹೆಸರು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಈ ಹಚ್ಚೆ ಹಾಕಿಸಿಕೊಳ್ಳುವಾಗ ಸಾಕಷ್ಟು ನೋವು ಅನುಭವಿಸಿದ್ದಾಳಂತೆ. ಆದ್ರೆ ಹಚ್ಚೆ ಹಾಕಿದ ಕೆಲವೇ ದಿನಗಳಲ್ಲಿ ಆಕೆಗೆ ಬ್ರೇಕ್ ಅಪ್ ಆಗಿದೆಯಂತೆ. ಇದು ದುರಾದೃಷ್ಟದ ಹಚ್ಚೆ ಎಂದು ಆಕೆ ಹೇಳಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಈಕೆ ವಿಡಿಯೋ ವೈರಲ್ ಆಗಿದೆ. ಅನೇಕರು ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಇದೇ ಮೊದಲ ಬಾರಿ ಇಷ್ಟು ಉದ್ದದ ಹಚ್ಚೆ ನೋಡಿರುವುದಾಗಿ ಒಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾನೆ.