ಕಲಬುರ್ಗಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.
ಪುಷ್ಪಾ (26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಬಾಡಿಗೆ ರೂಂ ನಲ್ಲಿ ವಾಸವಾಗಿದ್ದ ಯುವತಿ ಪುಷ್ಪಾ ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಈ ನಡುವೆ ಗಾಂಧಿನಗರದ ನಿವಾಸಿ ಕಿರಣ್ ಎಂಬಾತನನ್ನು ಪ್ರೀತಿಸಿದ್ದಳು.
ಕೆಲ ದಿನಗಳ ಹಿಂದೆ ಕಿರಣ್ ನನ್ನು ವಿವಾಹವಾಗುವಂತೆ ಕೇಳಿದ್ದಳು. ಆದರೆ ಯುವತಿ ಹಾಗೂ ಕಿರಣ್ ಮನೆಯಲ್ಲಿ ಜಾತಿ ಕಾರಣಕ್ಕಾಗಿ ಮದುವೆಗೆ ಒಪ್ಪಿರಲಿಲ್ಲ. ಕಿರಣ್ ಕೂಡ ಸದ್ಯಕ್ಕೆ ಮದುವೆ ಬೇಡ ಎಂದು ಸಮಾಧಾನ ಮಾಡಿದ್ದ. ಇದೇ ವಿಚಾರವಾಗಿ ತೀವ್ರವಾಗಿ ಮನನೊಂದಿದ್ದ ಪುಷ್ಪಾ ದುಡುಕಿನ ನಿರ್ಧಾರ ಮಾಡಿದ್ದಾಳೆ. ತಾನು ವಾಸವಾಗಿದ್ದ ರೂಮ್ ನಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾಳೆ.
ಕಲಬುರ್ಗಿ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.