ಮುಂಬೈ: ಸಾಕು ನಾಯಿಯೊಂದು ದಾಳಿ ಮಾಡಿದ ಪರಿಣಾಮ 10 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಅಂಧೇರಿ ಪೂರ್ವದ ಹೌಸಿಂಗ್ ಸೊಸೈಟಿಯಿಂದ ಈ ಘಟನೆ ವರದಿಯಾಗಿದೆ. ಬಾಲಕಿಗೆ 45 ಹೊಲಿಗೆಗಳ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ನಾಯಿ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ ಪೋಷಕರು
ವರದಿಯ ಪ್ರಕಾರ, ಬಾಲಕಿ ಸ್ನೇಹಿತನನ್ನು ಭೇಟಿ ಮಾಡಲು ಹೋಗಿದ್ದಾಗ ಸಾಕು ನಾಯಿ ಅವಳನ್ನು ಕಚ್ಚಿದೆ. ಪೋಷಕರು ಸಾಕುಪ್ರಾಣಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಯಿ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 154 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಬಾಲಕಿಯ ಮೇಲೆ ದಾಳಿ ಜರ್ಮನ್ ಶೆಫರ್ಡ್ ನಾಯಿ ದಾಳಿ ನಡೆಸಿದೆ. ಈ ನಾಯಿ ಸೊಸೈಟಿ ನಿವಾಸಿಯೊಬ್ಬರ ಮೇಲೆ ದಾಳಿ ಮಾಡುತ್ತಿರುವುದು ಇದು ಮೂರನೇ ಬಾರಿ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ. ಈ ಘಟನೆಯು ನವೆಂಬರ್ 27 ರಂದು ಅಂಧೇರಿಯ (ಪೂರ್ವ) ಎಂಐಡಿಸಿಯ ಲೋಧಾ ಎಟರ್ನಿಸ್ ಸೊಸೈಟಿಯಿಂದ ವರದಿಯಾಗಿದೆ.