ಈ ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ದಿನಕ್ಕೊಂಡು ವಿಡಿಯೋ ವೈರಲ್ ಆಗ್ತಾ ಇವೆ. ಯಾವುದಾದರೂ ಹೊಸ ಸಿನೆಮಾ, ಹಾಡುಗಳು ಬಂದರೆ ಸಾಕು, ಆ ಹಾಡಿಗೆ ತಕ್ಕಂತೆ ಸ್ಟೆಪ್ಸ್ ಹಾಕೊದು ಕಾಮನ್. ಈಗ ಹೈದ್ರಾಬಾದ್ ಮೆಟ್ರೋ ರೈಲಿನಲ್ಲಿ ಯುವತಿಯೊಬ್ಬಳು ಫೇಮಸ್ ಹಾಡಿಗೆ ಡಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ತಮಿಳಿನ ಅಂಟೆ ಸುಂದರಾಕಿ ಅನ್ನೋ ಸಿನೆಮಾ ಹಾಡು ‘ರಾ ರಾ ‘ ಸಖತ್ ಸೌಂಡ್ ಮಾಡ್ತಾ ಇದೆ. ಈ ಹಾಡಿಗೆ ಈಗ ಎಲ್ಲರೂ ತಮ್ಮದೇ ಸ್ಟೈಲ್ನಲ್ಲಿ ಸ್ಟೆಪ್ಸ್ ಹಾಕ್ತಿದ್ದಾರೆ. ಅದೇ ರೀತಿ ಇಲ್ಲಿ ಓರ್ವ ಯುವತಿ ಮೆಟ್ರೋ ರೈಲಿನ ಒಳಗೆಯೇ ಆ ಹಾಡಿಗೆ ಡಾನ್ಸ್ ಮಾಡಿದ್ದಾಳೆ. ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಈಗ ಹೈದ್ರಾಬಾದ್ ಮೆಟ್ರೋ ಅಧಿಕಾರಿಗಳು ಮೆಟ್ರೋ ನಿಯಮ ಉಲ್ಲಂಘಿಸಿದ್ದಕ್ಕಾಗಿ ಯುವತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ಧಾರೆ.
ಈ ವಿಡಿಯೋ ನೋಡಿ ನೆಟ್ಟಿಗರು ಯುವತಿಯ ವಿರುದ್ಧ ಕಿಡಿಕಾರಿದ್ಧಾರೆ. ಇನ್ನೂ ಕೆಲವರು ಹಾಡಿ ಹೊಗಳಿದ್ದಾರೆ. ಆದರೆ ಈ ರೀತಿ ಕಂಡ ಕಂಡಲ್ಲಿ ನೃತ್ಯ ಮಾಡುವುದು ಬೇರೆಯವರಿಗೆ ಮುಜುಗರ ಎದುರಿಸುವ ಹಾಗೆ ಮಾಡುತ್ತೆ ಅಂತ ಕೂಡಾ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ನಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅತ್ತ ಯಾರೂ ಗಮನ ಹರಿಸುತ್ತಿಲ್ಲ. ಕಂಡಕಂಡಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿ ಹೋಗುತ್ತಿದ್ದಾರೆ.
ಅದರ ಕುರಿತಾಗಿ ಯಾರೂ ಚರ್ಚೆ ಮಾಡುತ್ತಿಲ್ಲ. ಆದರೆ ಯಾರಾದ್ರೂ ಹೀಗೆ ನೃತ್ಯ ಮಾಡ್ತಿದ್ದಾರೆಂದ್ರೆ ಅದೇ ದೊಡ್ಡ ವಿಷಯ ಅನ್ನುವ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದೇವೆ.ಈ ವಿಡಿಯೊ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ಎ.ರೇವಂತ ರೆಡ್ಡಿ ಅವರ ಬೆಂಬಲಿಗರು ಉದ್ದೇಶ ಪೂರಕವಾಗಿಯೇ ಅಪ್ಲೋಡ್ ಮಾಡಿದ್ದಾರೆ. ಈಗ ಸರ್ಕಾರ ಯಾವ ರೀತಿಯಾಗಿ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಅವರು ಪರೀಕ್ಷೆ ಮಾಡುತ್ತಿದ್ದಾರೆ ಅಂತ ಇದಕ್ಕೆ ರಾಜಕೀಯ ಬಣ್ಣ ಕೊಡಲಾಗುತ್ತಿದೆ. ಒಟ್ಟಿನಲ್ಲಿ ಈ ವಿಡಿಯೋ ಈಗ ವೈರಲ್ ಆಗಿದ್ದು, ಯುವತಿಯ ನೃತ್ಯಕ್ಕೆ ಸಾವಿರಾರು ಜನ ಫಿದಾ ಆಗಿದ್ದಾರೆ.