ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಂದ 22 ವರ್ಷದ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಪೋಕ್ಸೋ ನ್ಯಾಯಾಲಯವೊಂದು ಮರಣದಂಡನೆ ವಿಧಿಸಿದೆ.
ಎಂಟು ವರ್ಷ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಅಮಾನುಷ ಕೃತ್ಯವೆಸಗಿದ ಅಶೋಕ್ ಕುಮಾರ್‌ಗೆ ಪೋಕ್ಸೋ ಕೋರ್ಟ್‌ನ ವಿಶೇಷ ನ್ಯಾಯಾಧೀಶೆ ಪಲ್ಲವಿ ಅಗರ್ವಾಲ್ ಮರಣದಂಡನೆಯ ಆದೇಶ ನೀಡಿದ್ದಾರೆ. ಆರೋಪಿಗೆ ಈ ಕೃತ್ಯವೆಸಗಿದ್ದಕ್ಕೆ 1.4 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ.
ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಿರುವುದಕ್ಕೆ ಸಮಾಧಾನವಾಗಿದೆ ಎಂದ ಸಂತ್ರಸ್ತೆಯ ತಂದೆ, ಆತನಿಗೆ ಶಿಕ್ಷೆ ಆಗುವವರೆಗೂ ತಮಗೆ ತೃಪ್ತಿಯಾಗದು ಎಂದಿದ್ದಾರೆ. ಪ್ರಕರಣದ ತೀರ್ಪನ್ನು 13 ತಿಂಗಳ ವಿಚಾರಣೆಯ ಬಳಿಕ ನೀಡಲಾಗಿದೆ.
ಸಂಪೂರ್ಣ ಮನೆಯನ್ನೇ ಸ್ಯಾನಿಟೈಸ್ ಮಾಡಿಸಿದ ಶಿಲ್ಪಾ ಶೆಟ್ಟಿ
ಆಗಸ್ಟ್ 4, 2020ರಂದು ಜಿಲ್ಲೆಯ ಖುರ್ಜಾ ಪ್ರದೇಶದಲ್ಲಿ ಅಪರಾಧ ನಡೆದಿದೆ. ಸಂತ್ರಸ್ತೆ ಹಾಗೂ ಆಕೆಯ ಸಹೋದರಿ ಸಹಕಾರ ಸಂಘದ ಗೋಡೌನ್ ಬಳಿ ಇರುವ ಮರವೊಂದರಲ್ಲಿ ಹಣ್ಣು ಕೀಳಲು ಹೋದ ವೇಳೆ ಬಾಲಕಿಯನ್ನು ತಿಂಡಿ ಕೊಡಿಸುವ ಆಸೆ ತೋರಿಸಿ ಪಕ್ಕದ ಮೈದಾನಕ್ಕೆ ಕರೆದೊಯ್ದ ಆರೋಪಿ, ಆಕೆ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಂದಿದ್ದಾನೆ.
ಸಂತ್ರಸ್ತೆಯ ತಂಗಿ, ಮನೆಗೆ ಬಂದರೂ ಆಕೆ ಮನೆಗೆ ಬಾರದೇ ಇದ್ದ ಕಾರಣ ಅಶೋಕ್‌ನನ್ನು ಪ್ರಶ್ನಿಸಿದ್ದಾರೆ ಆಕೆಯ ಕುಟುಂಬಸ್ಥರು. ಪೊಲೀಸರು ವಿಚಾರಣೆಗೊಳಪಡಿಸಿದ ವೇಳೆ ಬಾಯಿಬಿಟ್ಟ ಅಶೋಕ್, ಸಂತ್ರಸ್ತೆಯ ಶವವನ್ನು ಕಬ್ಬಿನ ಗದ್ದೆಯಲ್ಲಿ ಚೀಲವೊಂದರಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾನೆ. ಅಶೋಕ್ ಕೊಟ್ಟ ಮಾಹಿತಿ ಆಧರಿಸಿದ ಸಂತ್ರಸ್ತೆಯ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.