
ಸಾಮಾಜಿಕ ಜಾಲತಾಣದಲ್ಲಿ ಓಲಾ ಫ್ಯೂಚರ್ ಫ್ಯಾಕ್ಟರಿಯ ವಿಡಿಯೋವನ್ನು ಭವಿಶ್ ಅಗರ್ವಾಲ್ ಹಂಚಿಕೊಂಡಿದ್ದಾರೆ. ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಗರ್ಲ್ ಪವರ್ ಬಗ್ಗೆ ಅವರು ಮಾತನಾಡಿದ್ದಾರೆ. ಕಂಪನಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಫ್ಯೂಚರ್ ಫ್ಯಾಕ್ಟರಿಯಲ್ಲಿ ಪೂರ್ಣ ಸಾಮರ್ಥ್ಯದಲ್ಲಿ 10,000 ಮಹಿಳೆಯರನ್ನು ನೇಮಿಸಿಕೊಳ್ಳಲಿದೆ ಎಂದು ಅವರು ಮೊದಲೇ ಘೋಷಿಸಿದ್ದರು. ಇದು ವಿಶ್ವದ ಅತಿದೊಡ್ಡ ಮಹಿಳಾ ಉದ್ಯೋಗಿಗಳಿರುವ ಕಾರ್ಖಾನೆ ಎಂದು ಭವಿಶ್ ಅಗರ್ವಾಲ್ ಹೇಳಿದ್ದಾರೆ. ಫ್ಯೂಚರ್ ಫ್ಯಾಕ್ಟರಿಯ ಮಹಿಳಾ ಉದ್ಯೋಗಿಗಳು ಉತ್ಪಾದನೆಯನ್ನು ವೇಗವಾಗಿ ಹೆಚ್ಚಿಸುತ್ತಿದ್ದಾರೆ ಎಂದು ಓಲಾ ಸಿಇಒ ಬರೆದಿದ್ದಾರೆ.
ಇನ್ನು, ಮಹೀಂದ್ರಾ ಎಲೆಕ್ಟ್ರಿಕ್ ತನ್ನ ಮೊದಲ ಟ್ರಿಯೊವನ್ನು ಬಿಡುಗಡೆ ಮಾಡಿದ ನಂತರ ಮಹಿಳಾ ಶಕ್ತಿ ಬಗ್ಗೆ ತಿಳಿಸಿದೆ. ಮಹೀಂದ್ರಾ ಎಲೆಕ್ಟ್ರಿಕ್ ಸಿಇಒ ಸುಮನ್ ಮಿಶ್ರಾ ಅವರು ನೇಪಾಳದಲ್ಲಿ ಎಲೆಕ್ಟ್ರಿಕ್ ಆಟೋವನ್ನು ಮಹಿಳೆಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಮಹಿಳೆಯರ ಶಕ್ತಿ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ಅನೇಕರು ಓಲಾ ಮತ್ತು ಮಹೀಂದ್ರಾ ಕಂಪನಿಯಲ್ಲಿನ ಮಹಿಳಾ ಸಬಲೀಕರಣದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.