
ತಿಂಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಪ್ರಾಪ್ತ ಬಾಲಕಿ 42 ವರ್ಷದ ವ್ಯಕ್ತಿಯ ಜೊತೆ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಪೈವಳಿಕೆಯಲ್ಲಿ ನಡೆದಿದೆ.
ಪೈವಳಿಕೆ ಗ್ರಾಮದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಇದೇ ವೇಳೆ ಪಕ್ಕದ ಮನೆಯ 42 ವರ್ಷದ ಪ್ರದೀಪ್ ಎಂಬಾತ ಕೂಡ ನಾಪತ್ತೆಯಾಗಿದ್ದ. ಬಾಲಕಿ ಪೋಷಕರು ಪ್ರದೀಪ್ ವಿರುದ್ಧ ದೂರು ನೀಡಿದ್ದರು.
ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಬೆಳಕಿಗೆ ಬಂದಾಗಿನಿಂದ ಇಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇಬ್ಬರ ಪತ್ತೆಗಗೈ ವಿಶೇಷ ಪೊಲೀಸ್ತಂಡ ರಚಿಸಲಾಗಿತ್ತು. ಇದೀಗ ಬಾಲಕಿಯ ಮನೆಯ ಸಮೀಪವೇ ಮರದಲ್ಲಿ ಬಾಲಕಿ ಹಾಗೂ ಪ್ರದೀಪ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.