ಪ್ರೀತಿಗೆ ವಯಸ್ಸು, ಜಾತಿಯ ಅಂತರ ಗೊತ್ತಿರುವುದಿಲ್ಲ. ಎಲ್ಲಿಯಾದ್ರೂ ಚಿಗುರೊಡೆಯುವ ಶಕ್ತಿ ಪ್ರೀತಿಗಿದೆ. ಜಗತ್ತಿನಲ್ಲಿ ಅನೇಕರು ತಮಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ವ್ಯಕ್ತಿಗಳ ಜೊತೆ ಮದುವೆಯಾಗಿದ್ದಾರೆ. ಈಗ ಇನ್ನೊಬ್ಬ ಯುವತಿ ಕೂಡ ತನ್ನ ಪ್ರೀತಿಯ ವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ವಯಸ್ಸು 26 ವರ್ಷ. ಆಕೆ ಪ್ರೀತಿಸುತ್ತಿರುವ ವ್ಯಕ್ತಿ ವಯಸ್ಸು ಬರೋಬ್ಬರಿ 58 ವರ್ಷ.
ಯುಕೆ ಮೂಲದ ಜೆಸ್ಸಿಕಾ ಹಾಕಿಂಗ್ ಗೆಳೆಯ ಡರ್ಮೊಟ್ ಮುರ್ರೆಗೆ 58 ವರ್ಷ. ಜೆಸ್ಸಿಕಾ ಹಾಗೂ ಡರ್ಮೊಟ್ ಒಟ್ಟಿಗೆ ಹೋಗ್ತಿದ್ದರೆ ತಂದೆ-ಮಗಳಾ ಎಂದು ಎಲ್ಲರೂ ಪ್ರಶ್ನೆ ಮಾಡ್ತಾರಂತೆ. ವಯಸ್ಸಿನಲ್ಲಿ ಅಂತರವಿದ್ದರೂ ಪ್ರೀತಿ ಹಾಗೂ ದೈಹಿಕ ಸಂಬಂಧಕ್ಕೆ ಯಾವುದೇ ಕೊರತೆಯಿಲ್ಲ ಎನ್ನುತ್ತಾಳೆ ಜೆಸ್ಸಿಕಾ. ಡರ್ಮೊಟ್ ಸದೃಢವಾಗಿದ್ದು, ಲೈಂಗಿಕ ಸುಖದಲ್ಲೂ ನಾನು ತೃಪ್ತಿ ಹೊಂದಿದ್ದೇನೆ ಎನ್ನುತ್ತಾಳೆ.
ಇಬ್ಬರು, ಕಾಮನ್ ಫ್ರೆಂಡ್ ಮೂಲಕ ಮೊದಲು ಭೇಟಿಯಾಗಿದ್ದರಂತೆ. ಮಾತನಾಡ್ತಾ ಆಡ್ತಾ ಇಬ್ಬರು ಪ್ರೀತಿಯಲ್ಲಿ ಬಿದ್ದರಂತೆ. ಡರ್ಮೊಟ್ ಪ್ರೀತಿ ಮಾಡ್ತೇನೆಂದುಕೊಂಡಿರಲಿಲ್ಲ ಎನ್ನುತ್ತಾಳೆ ಆಕೆ. ಇಬ್ಬರ ಪ್ರೀತಿಯನ್ನು ತಾಯಿ ಕೂಡ ಒಪ್ಪಿಕೊಂಡಿದ್ದಾರಂತೆ. ಕೆಲವೇ ತಿಂಗಳಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಡರ್ಮೋಟ್ ಗಿಂತ ತನ್ನ ತಾಯಿ ನಾಲ್ಕು ವರ್ಷ ದೊಡ್ಡವರು. ಆದ್ರೆ ತಾಯಿಗೂ ಈ ಸಂಬಂಧದ ಬಗ್ಗೆ ಯಾವುದೇ ತಕರಾರಿಲ್ಲ. ಇಬ್ಬರೂ ಸುಖವಾಗಿದ್ದೇವೆ ಎನ್ನುತ್ತಾಳೆ ಜೆಸ್ಸಿಕಾ.