ಮಥುರಾ: ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ ಹೈವೇಯ ಮಥುರಾ ಬಳಿ ಯುವತಿಯ ಶವ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾಗಿದ್ದು, ಇದರ ಅಸಲಿಯತ್ತು ಜನರನ್ನು ಬೆಚ್ಚಿಬೀಳಿಸಿದೆ.
ಪೊಲೀಸರು ಮೊದಲು ಅತ್ಯಾಚಾರದ ಪ್ರಕರಣ ಎಂದು ಅಂದುಕೊಂಡಿದ್ದರು. ಯಮುನಾ ಎಕ್ಸ್‌ಪ್ರೆಸ್ ವೇ ಹಾದು ಹೋಗುವ ಮಥುರಾ ಬಳಿ ಕೆಂಪು ಬಣ್ಣದ ಟ್ರಾಲಿ ಬ್ಯಾಗ್ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಂಬ್ ಇರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ಆದರೆ ಪೊಲೀಸರು ಬಂದಾಗ ಪ್ಲಾಸ್ಟಿಕ್‌ನಲ್ಲಿ ಸುತ್ತಿಟ್ಟ ಯುವತಿಯ ಶವ ಪತ್ತೆಯಾಗಿತ್ತು.
21 ರಿಂದ 22ರ ಹರೆಯ ಯುವತಿಯ ಶವ ಇದಾಗಿದ್ದು, ಅತ್ಯಾಚಾರ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ತನಿಖೆ ವೇಳೆ ಭಯಾನಕ ಸತ್ಯ ಬಯಲಾಗಿದೆ. ಯುವತಿಯನ್ನು ದೆಹಲಿಯ ಬದರ್‌ಪುರದ ಆಯುಷಿ ಯಾದವ್ ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ ಕೆಲ ದಿನಗಳ ಹಿಂದೆ ಆಯುಷಿ ತನ್ನ ತಂದೆ ನಿತೇಶ್ ಯಾದವ್ ಅವರಿಗೆ ಹೇಳದೆ ಎಲ್ಲೋ ಹೋಗಿದ್ದಳು. ಅವಳು ಮನೆಗೆ ಹಿಂದಿರುಗಿದ ನಂತರ, ಆಕೆಯ ತಂದೆ ಕೋಪದಿಂದ ಅವಳಿಗೆ ಗುಂಡು ಹಾರಿಸಿದ್ದಾನೆ. ನಂತರ ಆಕೆಯ ದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ, ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಉತ್ತರ ಪ್ರದೇಶದ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಚೀಲವನ್ನು ಎಸೆದಿದ್ದಾನೆ ಎಂದು ತಿಳಿದುಬಂದಿದೆ.