ಅಹಮದಾಬಾದ್: ಬೆಂಕಿ ಪಾನ್ ಬಗ್ಗೆ ನೀವು ಕೇಳಿರ್ತೀರಾ.. ಆದ್ರೆ, ಬೆಂಕಿ ಗೋಲ್ಗಪ್ಪಾ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಹೌದು, ಗುಜರಾತ್ ನ ಅಹಮದಾಬಾದ್ ನಲ್ಲಿ ಆಹಾರ ಪ್ರಿಯರೊಬ್ಬರು ವಿಶೇಷ ಬೆಂಕಿ ಗೋಲ್ಗಪ್ಪಾ ತಿನ್ನುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ನೀವು ಗೋಲ್ಗಪ್ಪಾವನ್ನು ಯಾವ ರೀತಿಯಾಗಿ ತಿನ್ನುತ್ತೀರಿ..? ಗೋಲ್ಗಪ್ಪಾಗೆ ಸ್ವಲ್ಪ ಬಟಾಣಿಕಾಳು, ಆಲೂಗಡ್ಡೆ ಮಿಕ್ಸ್, ಸ್ವಲ್ಪ ಸೇವ್ ಹಾಕಿ ಪಾನಿಯಲ್ಲಿ ಅದ್ದಿ ಬಾಯಿಗಿಟ್ಟರೆ ಅಬ್ಬಾ…. ಏನ್ ರುಚಿ ಅಂತೀರಾ..! ಆದರೆ, ಇಲ್ಲಿ ಕೊಡುವ ಗೋಲ್ಗಪ್ಪಾಗೆ ಸ್ವಲ್ಪ ಟ್ವಿಸ್ಟ್ ಇದೆ. ಅದೇನೆಂದ್ರೆ, ಆಲೂಗಡ್ಡೆ, ಸೇವು ಮತ್ತು ಕರ್ಪೂರದಿಂದ ತುಂಬಿದ ಗೋಲ್ಗಪ್ಪಾಗೆ ಬೆಂಕಿ ಹಚ್ಚಲಾಗುತ್ತದೆ. ಬೆಂಕಿ ಉರಿಯುತ್ತಿದ್ದಂತೆ ಗೋಲ್ಗಪ್ಪಾವನ್ನು ಬಾಯೊಳಗೆ ಇಟ್ಟು ಸವಿಯುವುದು. ಇದುವೇ ಬೆಂಕಿ ಗೋಲ್ಗಪ್ಪಾ.
ಒಮಿಕ್ರಾನ್ ಆತಂಕದ ಹೊತ್ತಲ್ಲೇ ಕೊರೋನಾ ಸ್ಪೋಟ, ವಿದ್ಯಾರ್ಥಿಗಳು ಸೇರಿ ವಸತಿ ಶಾಲೆಯ 40 ಜನರಿಗೆ ಸೋಂಕು ದೃಢ
ಈ ವಿಡಿಯೋವನ್ನು ಕೃಪಾಲಿ ಪಟೇಲ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಆದರೆ ಹೆಚ್ಚಿನವರು ಈ ವಿಶೇಷ ಗೋಲ್ಗಪ್ಪಾದಿಂದ ಪ್ರಭಾವಿತರಾದಂತೆ ಕಾಣಲಿಲ್ಲ. ಹೆಚ್ಚಾಗಿ ಋಣಾತ್ಮಕ ಕಾಮೆಂಟ್ ಗಳನ್ನ ಮಾಡಿದ್ದು, ವಿಚಿತ್ರ ಕಾಂಬಿನೇಷನ್ ಗೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಅಪ್ಪಿತಪ್ಪಿಯೂ ಇದನ್ನು ಯಾರೂ ಟ್ರೈ ಮಾಡಲು ಹೋಗಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. ನಾವು ಸಹ ಇದನ್ನೇ ಹೇಳುತ್ತೇವೆ.
https://youtu.be/YgsAeLeMQ2s