ಹಣಕ್ಕೆ ದೈನಂದಿನ ಜೀವನದಲ್ಲಿ ಬಹಳ ಮಹತ್ವವಿದೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಬ್ಬ ಹುಡುಗಿ, ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದಿರುವ ವಿಡಿಯೋ ಮಾತ್ರ ಸಕತ್ ಮಜಾ ಇದೆ.
ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ನಾಮಿನಿ ಇಲ್ಲದಿದ್ರೆ ಕುಟುಂಬ ಸದಸ್ಯರೆಲ್ಲರಿಗೂ ಪರಿಹಾರ, ಎಕ್ಸ್-ಗ್ರೇಷಿಯಾ ಪಾವತಿಯಲ್ಲಿ ಮಹತ್ವದ ಬದಲಾವಣೆ
ಗಂಟಾ ಎನ್ನುವ ಇನ್ಸ್ಟಾಗ್ರಾಮ್ ಖಾತೆದಾರನೊಬ್ಬ ಹಂಚಿಕೊಂಡ ಈ ವಿಡಿಯೋದಲ್ಲಿ, ಆಕೆ ಯಾವ ಕಾರಣಕ್ಕಾಗಿ ಖುಷಿಯಿಂದ ಕುಣಿದಿದ್ದಾಳೆ ಅನ್ನೊಂದು ಗೊತ್ತಾಗಿಲ್ಲ. ಆದರೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡವನು, ಸಂಬಳ ಬಂದ ಖುಷಿ ನೋಡಿ ಅನ್ನೋ ಶೀರ್ಷಿಕೆ ಕೊಟ್ಟಿದ್ದಾನೆ.
ಬೆಳ್ಳಗಾಗಲು ಸಹಕಾರಿ ಕೊತ್ತಂಬರಿ ಸೊಪ್ಪಿನ ʼಫೇಸ್ ಪ್ಯಾಕ್ʼ
ಈ ವಿಡಿಯೋ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಆಕೆ ಸ್ಟೆಪ್ಸ್ ಹಾಕಿರೋದು ನೋಡಿದರೆ, ಈ ಹಣಕ್ಕಾಗಿ ಕಾಯುತ್ತಿದ್ದಳು ಎಂದು ಅನ್ನಿಸುತ್ತದೆ ಹಾಗು ಅದು ಬಂದ ಖುಷಿಯಲ್ಲಿ ಮನಬಂದಂತೆ ಕುಣಿದಿದ್ದಾಳೆ. ಅಷ್ಟೇ ಅಲ್ಲ, ಹಣ ಪಡೆದ ಬಳಿಕ, ಅದಕ್ಕೊಂದು ನಮಸ್ಕಾರ ಹಾಕಿರುವ ವಿಡಿಯೋ ನಿಮ್ಮ ಮುಖದಲ್ಲಿ ನಗೆ ಮೂಡಿಸೋದು ಮಾತ್ರ ಖಾತ್ರಿ.