ಕೆಲವು ಜನರಿಗೆ ಹಾವು ಅಂದ್ರೆ ಬಹಳ ಭಯವಿರುತ್ತದೆ. ಆದರೆ, ಪ್ರಪಂಚದಾದ್ಯಂತ ಅನೇಕ ಜನರು ಹಾವುಗಳನ್ನು ಸಾಕುಪ್ರಾಣಿಗಳಾಗಿರಿಸಿಕೊಳ್ಳುತ್ತಾರೆ. ಹೆಚ್ಚಾಗಿ ವಿಷಕಾರಿಯಲ್ಲದ ಹಾವುಗಳು ಕುಟುಂಬದ ಮನೆಗಳಲ್ಲಿ ಆಶ್ರಯ ಪಡೆಯುತ್ತವೆಯಾದರೂ, ಕೆಲವರು ವಿಷಪೂರಿತ ಹಾವುಗಳನ್ನು ಸಾಕುತ್ತಾರೆ.
ಅಲ್ಲದೆ, ಎಲ್ಲಾ ಜಾತಿಯ ಸರೀಸೃಪಗಳನ್ನು ಸಾಕಲಾಗುವುದಿಲ್ಲ. ಸಾಮಾನ್ಯವಾಗಿ ಸಾಕುವ ಹಾವುಗಳೆಂದರೆ ಬೋಯಿಡೆ, ಪೈಥೋನಿಡೆ ಮತ್ತು ಕೊಲುಬ್ರಿಡೆ.
ಸುಮಾರು 2,800 ವಿವಿಧ ಜಾತಿಯ ಹಾವುಗಳಿವೆ. ಆದರೆ, ಸಾಕಲು ಬೆರಳೆಣಿಕೆಯಷ್ಟಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಹಾವನ್ನು ಸಾಕುವುದು ಒಂದು ವಿಷಯ, ಆದರೆ ಸಾಕು ನಾಯಿ ಅಥವಾ ಬೆಕ್ಕಿನಂತೆ ಅದರೊಂದಿಗೆ ಚುಂಬಿಸುವುದು ಮತ್ತು ಮುದ್ದಾಡುವುದು ನೋಡುಗರಿಗೆ ಭಯ ಹುಟ್ಟಿಸುತ್ತದೆ. ಹಾಗೆಯೇ, ಇಲ್ಲೊಬ್ಬಳು ಯುವತಿ ಸಾಕುತ್ತಿರುವ ಹಾವಿಗೆ ಮುತ್ತಿಡುತ್ತಿರುವ ವಿಡಿಯೋ ಒಂದು ಸದ್ಯ ವೈರಲ್ ಆಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೂ ದೀಪಾವಳಿ ಆಚರಿಸಿದ ಯುವತಿ: ಹೇಗೆ ಗೊತ್ತಾ..?
ವಿಡಿಯೋದಲ್ಲಿ, ಹಾವು ಮಹಿಳೆಯ ಕುತ್ತಿಗೆಗೆ ಸುತ್ತಿಕೊಂಡಿದ್ದು ಅವಳ ಮುಖದ ಬಳಿ ಅದರ ತಲೆಯಿದೆ. ಅವಳು ಹಾವಿಗೆ ಮುತ್ತಿಡುತ್ತಿದ್ದರೆ, ನೆಟ್ಟಿಗರು ಆಘಾತಗೊಂಡಿದ್ದಾರೆ. ಆಕೆ ಸರೀಸೃಪದೊಂದಿಗೆ ಕೆಲವು ಸೆಕೆಂಡುಗಳ ಕಾಲ ಮುದ್ದಾಡಿದ್ದಾಳೆ. ನಂತರ ಅದರ ಗಲ್ಲವನ್ನು ಚುಂಬಿಸಿದ್ದಾಳೆ. ಅಷ್ಟೇ ಅಲ್ಲ ಹಾವು ತನ್ನ ಬಾಯಿಯ ಬಳಿ ಬರುತ್ತಿದ್ದಂತೆ ಐ ಲವ್ ಯೂ ಎಂದು ಕೂಡ ಹೇಳಿದ್ದಾಳೆ. ಅಲ್ಲದೆ ಆಕೆ ಚುಂಬಿಸುತ್ತಿರಬೇಕಾದ್ರೆ ಹಾವು ಬಾಯಿ ತೆರೆದುಕೊಳ್ಳುತ್ತದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 9,700 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ನೆಟ್ಟಿಗರಂತೂ ವಿಡಿಯೋ ನೋಡಿ ಅಬ್ಬಬ್ಬಾ ಅಂದಿದ್ದಾರೆ.
https://youtu.be/YOcxfLFoHWA