ದೇಶದ ಹಲವು ನಗರಗಳಲ್ಲಿ ದಾರಿ ಎನ್ನುವುದು ಜನರಿಗೆ ಮರೀಚಿಕೆಯಾಗಿದೆ. ಅಪಾಯಕಾರಿಯಾಗಿರುವ ಸೇತುವೆ ದಾಟಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡುಹೋಗುವ ಸ್ಥಿತಿ ಇದೆ. ಕರ್ನಾಟಕದಲ್ಲಿಯೇ ಕೆಲವು ಕಡೆಗಳಲ್ಲಿ ಅಪಾಯಕಾರಿ ಸಂಕಗಳನ್ನು ದಾಟಿ ಮಕ್ಕಳು ಶಾಲೆಗೆ ಹೋಗುವ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅಂಥದ್ದೇ ಒಂದು ವಿಡಿಯೋ ಇಲ್ಲಿದೆ.
ಬಾಲಕಿಯೊಬ್ಬಳು ಶಾಲೆಗೆ ಹೋಗಲು ನದಿಯ ಮೂಲಕ ಜಿಪ್‌ಲೈನ್ ಬಳಸಿದ ವಿಡಿಯೋ ಇದಾಗಿದ್ದು, ನೋಡುವಾಗ ಭಯವಾಗುವುದು ಗ್ಯಾರೆಂಟಿ. ವಿಡಿಯೋದಲ್ಲಿ ಶಾಲೆಗೆ ಹೋಗುವ ಹುಡುಗಿಯೊಬ್ಬಳು ಬಲೆಯನ್ನು ಹಿಡಿದುಕೊಂಡು ವೇಗವಾಗಿ ಹರಿಯುವ ನದಿಯ ಮೂಲಕ ಇನ್ನೊಂದು ಬದಿಗೆ ಹೋಗುವುದನ್ನು ಇಲ್ಲಿ ನೋಡಬಹುದು.
ಸಮವಸ್ತ್ರ ಧರಿಸಿರುವ ಬಾಲಕಿ, ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಅಪಾಯಕಾರಿಯಾಗಿ ಹೀಗೆ ದಾಟುತ್ತಿರುವುದು ನೆಟ್ಟಿಗರನ್ನು ಶಾಕ್ಗೆ ತಳ್ಳಿದೆ. ಅಂಕಣಕಾರ ವಾಲಾ ಅಫ್ಶರ್ ಅವರು ಈ ಹೃದಯ ವಿದ್ರಾವಕ ವಿಡಿಯೋವನ್ನು ಹಂಚಿಕೊಂಡಿದ್ದು, ಹೇಗೆ ಮಕ್ಕಳು ಜೀವವನ್ನು ಅಪಾಯಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಅವರು ಹೇಳಿದ್ದಾರೆ.