
ಭಾರತ ಪ್ರತಿಭೆಗಳ ಕೊರತೆಯಿಲ್ಲದ ದೇಶ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಯುವತಿಯೊಬ್ಬಳ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆಯ ಮೋಡಿ ಮಾಡುವ ಧ್ವನಿಗೆ ನೆಟ್ಟಿಗರು ಮನಸೋತಿದ್ದಾರೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಆಗಸ್ಟ್ 7 ರಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದುವರೆಗೆ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯೊಬ್ಬಳು ಲತಾ ಮಂಗೇಶ್ಕರ್ ಅವರ ಪಿಯಾ ತೋಸೆ ನೈನಾ ಲಾಗೇ ರೇ ಹಾಡನ್ನು ಹಾಡಿದ್ದಾಳೆ. ಗಾಯನ ಸ್ಪರ್ಧೆಗಾಗಿ ಆಕೆಯ ಆಡಿಷನ್ ಮಾಡಲಾಗಿತ್ತು. ಆದರೆ, ಆಕೆ ಅದರಿಂದ ತಿರಸ್ಕರಿಸಲ್ಪಟ್ಟಳು. ಆಕೆಯನ್ನು ವರದಿಗಾರರೊಬ್ಬರು ಹಾಡಲು ಹೇಳಿದಾಗ, ಅವಳ ಧ್ವನಿಯು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು.
ಯುವತಿಯ ಅದ್ಭುತ ಕಂಠಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಆ ಮುಗ್ಧ ಯುವತಿಯ ಧ್ವನಿ, ನಾದದ ಗುಣಮಟ್ಟ ಮತ್ತು ಮಧುರ ಧ್ವನಿ ಎಲ್ಲರ ಹೃದಯವನ್ನು ಗೆದ್ದಿದೆ. ನಿಮ್ಮ ರಿಯಾಲಿಟಿ ಶೋಗೆ ಅವಳನ್ನು ಕರೆದೊಯ್ಯಿರಿ ಎಂದು ಬಳಕೆದಾರರು ಮನವಿ ಮಾಡಿದ್ದಾರೆ.