ಬಿಹಾರದ ಅರಾ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇದಿಕೆಯ ಮೇಲೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ.
ಮೃತ ನೈನಾ ಕುಮಾರಿ ಕುಟುಂಬದವರು ಡೆಕೊರೇಟರ್ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಶುಕ್ರವಾರ ಮಹೇಂದ್ರ ಸಿಂಗ್ ಮಗಳು ಆಶಾಕುಮಾರಿಯ ಮದುವೆ ನಡೆದಿದ್ದು, ಹೂಮಾಲೆ ವಿನಿಮಯ ಮಾಡಿಕೊಂಡ ನಂತರ ದಂಪತಿಗಳು ವೇದಿಕೆಯಿಂದ ಇಳಿದಿದ್ದಾರೆ. ನಂತರ, ಹುಡುಗಿ ಮೇಲಕ್ಕೆ ಹೋಗಿ ಆಟವಾಡುವ ವೇಳೆ ಘಟನೆ ನಡೆದಿದೆ.
ಆಟವಾಡುತ್ತಿದ್ದಾಗ ವೇದಿಕೆಯಲ್ಲಿದ್ದ ವಿದ್ಯುತ್ ತಂತಿ ನೈನಾಗೆ ತಗುಲಿ ವಿದ್ಯುತ್ ಸ್ಪರ್ಶವಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ಪಡೆದಿದ್ದಾರೆ. ಟೆಂಟ್ ಡೆಕೋರೇಟರ್ ಎಸ್. ಕುಮಾರ್ ಕೇಸರಿ ಮತ್ತು ರಂಜಿತ್ ಕುಮಾರ್ ವಿರುದ್ಧ ಮಹೇಂದ್ರ ಸಿಂಗ್ ಅವರು ದೂರು ದಾಖಲಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.