ಶುಂಠಿಯನ್ನು ಅಡುಗೆ ಮನೆಯಲ್ಲಿ ಮಸಾಲೆ ಪದಾರ್ಥವಾಗಿ ಬಳಸ್ತಾರೆ. ಇದ್ರಲ್ಲಿ ತಾಮ್ರ ಮತ್ತು ಮ್ಯಾಂಗನೀಸ್ ಅಂಶ ಹೇರಳವಾಗಿರುತ್ತದೆ. ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಬಳಸ್ತಾರೆ. ಇದು ದೇಹವನ್ನು ಉಷ್ಣಗೊಳಿಸುವುದೇ ಇದಕ್ಕೆ ಕಾರಣ. ಶುಂಠಿಯಲ್ಲಿ ಸಾಕಷ್ಟು ಔಷಧಿ ಗುಣಗಳಿವೆ.
ಗ್ಯಾಸ್ ಸಮಸ್ಯೆಯಿದ್ದವರಿಗೆ ಶುಂಠಿ ರಾಮಬಾಣ. 125 ಗ್ರಾಂ ಒಣ ಶುಂಠಿ ಪುಡಿ ಹಾಗೂ 250 ಗ್ರಾಂ ಎಳ್ಳಿನ ಪುಡಿಯನ್ನು ಬೆಲ್ಲದೊಂದಿಗೆ ಬೆರೆಸಿ ಉಂಡೆ ಮಾಡಿಟ್ಟುಕೊಳ್ಳಿ. ಪ್ರತಿದಿನ ಒಂದು ಉಂಡೆಯನ್ನು ಸೇವನೆ ಮಾಡುತ್ತ ಬನ್ನಿ.
ಅತಿಸಾರವಾದ್ರೆ 100 ಗ್ರಾಂ ಒಣ ಶುಂಠಿ, 3 ಚಮಚ ಹರಳುಪ್ಪು ಹಾಗೂ ನಾಲ್ಕು ಚಮಚ ಹುರಿದ ಜೀರಿಗೆ ಸೇರಿಸಿ ಚೂರ್ಣ ತಯಾರಿಸಿಕೊಳ್ಳಿ. ಊಟವಾದ ನಂತ್ರ ಪ್ರತಿದಿನ ಒಂದು ಚಮಚ ಚೂರ್ಣವನ್ನು ನೀರಿಗೆ ಬೆರೆಸಿ ಕುಡಿಯಿರಿ.
ಅರ್ಧ ಚಮಚ ಶುಂಠಿ ರಸವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಿ. ಬೆಳಿಗ್ಗೆ ಈ ಮಿಶ್ರಣವನ್ನು ಕುಡಿಯುತ್ತ ಬಂದ್ರೆ ಹೊಟ್ಟೆ ಹುಳುವಿನ ಸಮಸ್ಯೆ ಮಾಯವಾಗುತ್ತದೆ.
ಒಂದು ಚಮಚ ಶುಂಠಿ ಪುಡಿಯನ್ನು ನೀರಿನಲ್ಲಿ ಹಾಕಿ ಬಿಸಿ ಮಾಡಿ. ನಂತ್ರ ಅದ್ರಲ್ಲಿ ಬಾಯಿ ಮುಕ್ಕಳಿಸಿದ್ರೆ ಬಾಯಿ ವಾಸನೆ ಕಡಿಮೆಯಾಗುತ್ತದೆ.