ಕನ್ನಡ ಅಭಿಮಾನಿಗಳು ನೋಡಲು ಕಾದು ಕುಳಿತಿರುವ ಚಿತ್ರಗಳಲ್ಲಿ ನಿಶ್ಕಲ್ಮಶ ಪ್ರೇಮಕಥೆ ಹೊಂದಿರುವ ಗಿಲ್ಕಿ ಕೂಡ ಒಂದು. ಈ ಚಿತ್ರವನ್ನು ವೈಕೆ ನಿರ್ದೇಶಿಸಿದ್ದಾರೆ. ಗಿಲ್ಕಿಯ ಆ ದೇವರೇ ಹಾಡು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈಗ ಮತ್ತೊಂದು ಹಾಡು ರಿಲೀಸ್ ಆಗಿದೆ.
ತೀರ ಸೇರೋ ಶೀರ್ಷಿಕೆಯ ಈ ಹಾಡು, ಅಭಿಮಾನಿಗಳ ಮನಸ್ಸು ನಾಟುತ್ತದೆ. ಪ್ರತಿಯೊಬ್ಬರ ನಟನೆ, ಹಾಡು ಅಧ್ಬುತವಾಗಿದೆ. ಗಿಲ್ಕಿ ಚಿತ್ರದ ಹೊಸ ಹಾಡನ್ನು, ಗರುಡ ಗಮನ ವೃಷಭ ವಾಹನ ಸಿನಿಮಾದ ನಟ ಹಾಗೂ ನಿರ್ದೇಶಕರಾದ ರಾಜ್ ಬಿ ಶೆಟ್ಟಿ ಬಿಡುಗಡೆ ಮಾಡಿದರು. ಮಂಗಳೂರಿನಲ್ಲಿ ಹಾಡು ಬಿಡುಗಡೆ ಮಾಡಿದ ಅವರು ಸಿನಿಮಾ ತಂಡಕ್ಕೆ ಶುಭಕೋರಿದ್ದಾರೆ.
ವಾಸುಕಿ ವೈಭವ್ ಸಾಹಿತ್ಯ, ಆದಿಲ್ ನಡಾಫ್ ಸಂಗೀತ ಸಂಯೋಜನೆ ಗಮನ ಸೆಳೆಯುತ್ತದೆ. ಹಾಡಿಗೆ ಭರತ್ ನಾಯಕ್ ಇಂಪಾದ ಧ್ವನಿ ನೀಡಿದ್ದಾರೆ. ನಟ ತಾರಕ್ ಪೊನ್ನಪ್ಪ, ನಟಿ ಚೈತ್ರಾ ಗಿಲ್ಕಿ ಚಿತ್ರದಲ್ಲಿ ನಟಿಸಿದ್ದಾರೆ. ಎ.ಎಸ್ ಕಾಮಧೇನು ಫಿಲ್ಮ್ಸ್ ಬ್ಯಾನರ್ ನಡಿ ಚಿತ್ರ ಮೂಡಿ ಬಂದಿದೆ. ನರಸಿಂಹ ಕುಲಕರ್ಣಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ತಾರಕ್ ಪೊನ್ನಪ್ಪ, ಚೈತ್ರಾ ಆಚಾರ್, ಗೌತಮ್ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.