1500 ವರ್ಷಗಳಷ್ಟು ಹಳೆಯ ಕಾಲವಾದ ಬಿಜ಼ಾಂಟೈನ್ ಕಾಲಘಟ್ಟಕ್ಕೆ ಸೇರಿದ್ದು ಎನ್ನಲಾದ ವೈನ್ ಉತ್ಪಾದನಾ ಸೌಲಭ್ಯವೊಂದನ್ನು ಇತಿಹಾಸಕಾರರು ಇಸ್ರೇಲ್‌ನಲ್ಲಿ ಪತ್ತೆ ಮಾಡಿದ್ದಾರೆ.
ನೆಟ್ಟಿಗರ ಅಸಹನೆಗೆ ಕಾರಣವಾಯ್ತು ಈ ವಿಡಿಯೋ…!
ಮಣ್ಣಿನಿಂದ ಮಾಡಲಾದ ನೂರಾರು ಜಾರುಗಳು ಹಾಗೂ ಅವುಗಳ ಚೂರುಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ವೈನ್ ಉತ್ಪಾದನೆಯ ಅನೇಕ ಘಟಕಗಳ ನಡುವೆ ಉತ್ತಮ ಸಂಪರ್ಕವಿರುವುದನ್ನು ಈ ಘಟಕದಲ್ಲಿ ಕಾಣಲಾಗಿದೆ.
OMG ! ಬೆಚ್ಚಿಬೀಳಿಸುವಂತಿದೆ ಮಹಿಳೆ ಮಲಗಿದ್ದಾಗ ನಡೆದಿರುವ ಈ ಘಟನೆ
ಬಿಜ಼ಂಟೈನ್ ಕಾಲದ ಅತಿ ದೊಡ್ಡ ವೈನರಿ ಇದಾಗಿರಬಹುದು ಎಂದು ಪ್ರಾಚ್ಯವಸ್ತು ತಜ್ಞರು ಅಂದಾಜಿಸಿದ್ದಾರೆ.
“ಪ್ರಾಚೀನ ಯಾವ್ನೆಯ ಕೈಗಾರಿಕಾ ಪ್ರದೇಶ ಇದಾಗಿದೆ,” ಎಂದು ಪ್ರಾಚ್ಯವಸ್ತು ತಜ್ಞ ಡಾ. ಜಾನ್ ಸೆಲಿಗ್ಮನ್ ತಿಳಿಸಿದ್ದಾರೆ.
ಇದೇ ವೇಳೆ, ಗಾಜು ಹಾಗೂ ಲೋಹಗಳ ಉತ್ಪಾದನಾ ಸವಲತ್ತುಗಳನ್ನೂ ಸಹ ಶೋಧಿಸಲಾಗಿದ್ದು, 9ನೇ ಶತಮಾನಕ್ಕೆ ಸೇರಿದ ಈ ಕಟ್ಟಡಗಳು ಬಿಜ಼ಾಂಟೈನ್ ಮತ್ತು ಇಸ್ಮಾಮಿಕ್ ಕಾಲಘಟ್ಟದ ನಡುವಿನ ಕಾಲಕ್ಕೆ ಸೇರಿದ್ದಿರಬಹುದು ಎಂದು ಅಂದಾಜಿಸಲಾಗಿದೆ.