ಕೊಪ್ಪಳ: ಕೊರೋನಾ ಲಸಿಕೆ ಪಡೆಯಲು ಅನೇಕರು ಹಿಂದೇಟು ಹಾಕುತ್ತಾರೆ. ಇಂತಹವರಿಗೆ ಲಸಿಕೆ ಪಡೆಯುವಂತೆ ಉತ್ತೇಜನ ನೀಡುವ ಉದ್ದೇಶದಿಂದ ಕಿವಿಯೋಲೆ ಹಾಗೂ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಗಿದೆ.
ಕೊಪ್ಪಳದ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸೈಯದಾ ಶಹನಾಜ್ ಬೇಗಂ ಮತ್ತು ಅವರ ಪತಿ ನಾಸೀರ್ ಹುಸೇನ್ ಅವರು ಹುಸೇನಿ ಮೊಹಲ್ಲಾ ಮುಸ್ಲಿಂ ಕಮಿಟಿ ನೇತೃತ್ವದಲ್ಲಿ ಲಸಿಕೆ ಹಾಕಿಸಿಕೊಂಡವರಿಗೆ ಕೊಡುಗೆ ನೀಡಿದ್ದಾರೆ.
200 ಜನರಿಗೆ ಲಸಿಕೆ ಹಾಕಿಸಲಾಗಿದ್ದು, ಮಹಿಳೆಯರು ಲಸಿಕೆ ಪಡೆಯುವಂತೆ ಉತ್ತೇಜಿಸಲು ಕೊಡುಗೆ ನೀಡಲಾಗಿದೆ. 1.5 ಗ್ರಾಂ ತೂಕದ ಚಿನ್ನದ ಕಿವಿಯೋಲೆ ಮತ್ತು 50 ಸೀರೆಗಳನ್ನು ಪ್ರಥಮ, ಸಮಾಧಾನಕರ ಬಹುಮಾನಗಳನ್ನಾಗಿ ನೀಡಲಾಗಿದೆ. ಲಸಿಕೆ ಪಡೆದವರ ಹೆಸರು, ವಿವರ ಬರೆದು ಬಾಕ್ಸ್ ನಲ್ಲಿ ಹಾಕಲಾಗಿದ್ದು, ನಂತರ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಜಮೀಲಾ ಬೇಗಂಗೆ ಚಿನ್ನದ ಕಿವಿಯೋಲೆ ದೊರೆತಿದೆ. ಉಳಿದವರಿಗೆ ಸೀರೆ ನೀಡಲಾಗಿದೆ ಎಂದು ಹೇಳಲಾಗಿದೆ.