ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕಡೆಗೆ ಬೃಹತ್ ಮಂಜುಗಡ್ಡೆ ತೇಲುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರನ್ನು ಬೆಚ್ಚಿಬೀಳಿಸಿದೆ.
ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಚಿಕ್ಕ ವಿಡಿಯೋದಲ್ಲಿ, ಕೆನಡಾದ ಪೂರ್ವ ಕರಾವಳಿಯತ್ತ ಸಾಗುತ್ತಿರುವ ಬೃಹತ್ ಮಂಜುಗಡ್ಡೆಯ ದೃಶ್ಯವನ್ನು ಸೆರೆಹಿಡಿಯಲಾಗಿದೆ. ದೈತ್ಯ ಅಲೆಯು ಕರಾವಳಿಯುದ್ದಕ್ಕೂ ಇರುವ ಜನವಸತಿಗಳನ್ನು ನಜ್ಜುಗುಜ್ಜುಗೊಳಿಸುವ ಅಪಾಯವಿದೆ ಅಂತಾ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ದೈತ್ಯ ಮಂಜುಗಡ್ಡೆಯ ವಿಡಿಯೋ ಪೋಸ್ಟ್ ಮಾಡಿದ ನಂತರ, ಇದು 10 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಿದೆ. ಸದ್ಯ, ಈ ವಿಡಿಯೋ ಇದೀಗ ಟ್ರೆಂಡಿಂಗ್ ನಲ್ಲಿದ್ದು, ಕಳೆದ ತಿಂಗಳು ಚಿತ್ರೀಕರಿಸಲಾಗಿದೆ. ವಿಡಿಯೋವನ್ನು ಮೊದಲು ಟಿಕ್‌ಟಾಕ್‌ನಲ್ಲಿ ಎಮೋಯಿನು ಒಯಿನಾಮ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವನ್ನು ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮರು ಹಂಚಿಕೊಳ್ಳಲಾಗಿದೆ.
ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ನ್ಯೂಫೌಂಡ್‌ಲ್ಯಾಂಡ್‌ನ ಕರಾವಳಿಯ ಕಡೆಗೆ ಪೂರ್ವಕ್ಕೆ ಚಲಿಸುವ ಮಂಜುಗಡ್ಡೆಗಳು ಸಾಮಾನ್ಯವಾಗಿ ಗ್ರೀನ್‌ಲ್ಯಾಂಡ್‌ನ ಹಿಮನದಿಗಳ ತುಂಡುಗಳಾಗಿವೆ ಎಂದು ಹೇಳಲಾಗಿದೆ.