ವಸಾಯಿ: ಮಹಾರಾಷ್ಟ್ರದ ವಸಾಯಿಯ ಮರ್ಡೆಸ್ ಬೀಚ್ನಲ್ಲಿ ಅರಬ್ಬಿ ಸಮುದ್ರದಿಂದ ಸಮುದ್ರ ತೀರದಲ್ಲಿ ಕೊಚ್ಚಿ ಹೋಗಿರುವ 30 ಟನ್ಗಳಷ್ಟು ತೂಕದ 40 ಅಡಿ ಉದ್ದದ ತಿಮಿಂಗಿಲದ ಬೃಹತ್ ಮೃತದೇಹ ಪತ್ತೆಯಾಗಿದೆ.
ತಿಮಿಂಗಿಲದ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸುತ್ತಮುತ್ತಲ ಪ್ರದೇಶದವರೆಗೆ ತೀವ್ರವಾದ ಉಸಿರುಗಟ್ಟಿಸುವ ವಾಸನೆ ಹೊರಬರುತ್ತಿದೆ. ದೈತ್ಯಾಕಾರದ ಸಮುದ್ರ ಜೀವಿ ತಿಮಿಂಗಿಲ ಆಗಸ್ಟ್ನಲ್ಲಿ ಸತ್ತಿರಬಹುದು ಎಂದು ಹೇಳಲಾಗಿದೆ. ಈ ಮಧ್ಯೆ ತಿಮಿಂಗಿಲ ಮೃತದೇಹದ ಜೊತೆ ಸೆಲ್ಫಿ ಕ್ಲಿಕ್ಕಿಸಲು ಸ್ಥಳೀಯರು ಮುಗಿಬಿದ್ದಿದ್ದಾರೆ.
“ಬೃಹತ್ ಮೃತದೇಹವನ್ನು ತೆಗೆಯುವುದು ಮತ್ತು ವಿಲೇವಾರಿ ಮಾಡುವುದು ತುಂಬಾ ಕಷ್ಟಕರವಾಗಿದೆ. ಬೀದಿ ನಾಯಿಗಳು ಅದನ್ನು ತಿನ್ನುವುದನ್ನು ತಡೆಯಲು ಮತ್ತು ದುರ್ನಾತ ಬೀರುವುದನ್ನು ತಡೆಗಟ್ಟಲು ನಾವು ಅದನ್ನು ಸಮುದ್ರತೀರದಲ್ಲಿ ಹೂಳಲು ಪ್ರಯತ್ನಿಸುತ್ತೇವೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.