ಬೆಂಗಳೂರು : ರಾಜ್ಯದ ಹಲವು ಮಹಿಳೆಯರಿಗೆ ಇನ್ನೂ ಕೂಡ ‘ಗೃಹಲಕ್ಷ್ಮಿ’ ಯೋಜನೆಯ 2000 ರೂ ಹಣ ಬಂದಿಲ್ಲ, ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
‘ಗೃಹಲಕ್ಷ್ಮಿ’ ಹಣ ಬಂದಿಲ್ಲ ಅಂದ್ರೆ ಯಾರನ್ನು ಭೇಟಿಯಾಗ್ಬೇಕು ಎಂಬ ಸುದ್ದಿಗಾರರ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ನೀಡಿದ್ದಾರೆ. ಅರ್ಜಿ ಹಾಕಿದ ಎಲ್ಲರಿಗೂ ಹಣ ಬರುತ್ತೆ ಇಷ್ಟು ಮಾತ್ರ ಹೇಳಬಲ್ಲೆ. 8 ಲಕ್ಷ ಮಂದಿ ಮಹಿಳೆಯರ ಅಕೌಂಟ್ ನಂಬರ್ ಸರಿಯಿಲ್ಲ, ಹಾಗಾಗಿ ಅವರ ಖಾತೆಗೆ ಹಣ ಬಂದಿಲ್ಲ. ಯಾರಿಗೆಲ್ಲಾ ಸಂದೇಶ ಹೋಗಿದ್ಯೋ ಅವರ ಖಾತೆಗೆ ಹಣ ಬರುತ್ತದೆ ಎಂದರು.
ಯೋಜನೆಗೆ ರಿಜಿಸ್ಟರ್ ಮಾಡಿ ರಿಸಿಪ್ಟ್ ತೆಗೆದುಕೊಂಡವರು ಯಾರಿಗೆ ಹಣ ಬಂದಿಲ್ಲವೋ..ಅವರ ಮನೆಗೆ ಸೂಪರ್ ವೈಸರ್ ಹಾಗೂ ಅಂಗನವಾಡಿ ಟೀಚರ್ ಗಳನ್ನು ಕಳುಹಿಸುತ್ತೇವೆ. ಅವರು ಈ ಬಗ್ಗೆ ಪರಿಶೀಲನೆ ಮಾಡಲಿದ್ದಾರೆ ಎಂದರು.
ಹಣ ಬರದೇ ಹೋದರೆ ಯಾರನ್ನು ಭೇಟಿಯಾಗಬೇಕು ಎಂಬುದನ್ನು ಸದ್ಯದಲ್ಲೇ ಹೇಳುತ್ತೇನೆ, ಈ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ. ಈ ಸಮಸ್ಯೆ ಬಗೆಹರಿಸಲು ಒಂದು ಸಹಾಯವಾಣಿ ಆರಂಭಿಸಿ ಹಣ ಬರದೇ ಹೋದರೆ ಯಾರನ್ನು ಭೇಟಿಯಾಗಬೇಕು ಎಂಬುದನ್ನು ನಾವು ಹೇಳುತ್ತೇವೆ ಎಂದರು. ನಾವು ಯಾರಿಗೂ ತಾರತಮ್ಯ ಮಾಡುವುದಿಲ್ಲ..ಎಲ್ಲರ ಖಾತೆಗೂ ಹಣ ಹಾಕುತ್ತೇವೆ ಎಂದರು.