Viral Video | ಹುಡುಗರ ಹಾಸ್ಟೆಲ್ ನಲ್ಲಿ ಹೆಣ್ಣು ಧ್ವನಿ; ದೆವ್ವ ಓಡಾಡ್ತಿದೆ ಎಂಬ ಭೀತಿ 12-05-2023 7:46AM IST / No Comments / Posted In: Latest News, India, Live News ಛತ್ತೀಸ್‌ಗಢದ ಮಹಾಸಮುಂದ್ ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನ ಕಾರಿಡಾರ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ದೆವ್ವ ನಡೆದು ಹೋಗುತ್ತಿದೆ ಎಂಬ ವದಂತಿಯು ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸಿದೆ. ಹಾಸ್ಟೆಲ್‌ನಲ್ಲಿ ಹುಡುಗಿಯೊಬ್ಬಳು ನಗುತ್ತಿರುವ ಸದ್ದು ಕೇಳಿಸುತ್ತಿದೆ ಆದರೆ ತಮ್ಮ ಕೊಠಡಿಯಿಂದ ಹೊರಗೆ ಬಂದಾಗ ಯಾರೂ ಕಾಣುತ್ತಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಇತ್ತೀಚೆಗಷ್ಟೇ ಪೊಲೀಸ್ ತಂಡವೊಂದು ಕೂಡ ಹಾಸ್ಟೆಲ್‌ಗೆ ತೆರಳಿ ತನಿಖೆ ನಡೆಸಿದೆ. ಈ ವೇಳೆ ಪೊಲೀಸರ ಸಮ್ಮುಖದಲ್ಲಿ ಹೆಣ್ಣು ನಗುವಿನ ಸದ್ದುಗಳು ಕೇಳಿಬರುತ್ತಿದ್ದವು. ಆದರೆ ಆ ಶಬ್ದದ ಮೂಲವನ್ನು ಹುಡುಕಲು ಸಾಧ್ಯವಾಗಲಿಲ್ಲ. ಬಾಲಕರ ಹಾಸ್ಟೆಲ್‌ನಲ್ಲಿ 54 ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಹುಡುಗರಿಗೆ ಶಬ್ದ ಕೇಳಲು ಪ್ರಾರಂಭಿಸಿದಾಗ ಹಾಸ್ಟೆಲ್‌ನಲ್ಲಿ ಕೇವಲ 5-6 ಹುಡುಗರು ಇದ್ದರು, ಇತರರು ಬೇಸಿಗೆ ರಜೆಗೆ ಮನೆಗೆ ಹೋಗಿದ್ದರು. ಈ ಬಗ್ಗೆ ವೈದ್ಯಕೀಯ ಕಾಲೇಜು ಡೀನ್ ಯಾಸ್ಮಿನ್ ಖಾನ್ ಇದು ಕೇವಲ ವದಂತಿ. ಈ ಘಟನೆಯ ಬಗ್ಗೆ ನನಗೆ ತಿಳಿದಾಗ ನಾನು ಮಹಾಸಮುಂದ್ ಪೊಲೀಸ್ ಅಧೀಕ್ಷಕರೊಂದಿಗೆ ಮಾತನಾಡಿ ಸಂಪೂರ್ಣ ಮಾಹಿತಿ ನೀಡಿದ್ದೇನೆ. ವಿದ್ಯಾರ್ಥಿಗಳು ರಜೆ ನಿಮಿತ್ತ ಊರಿಗೆ ತೆರಳಿದ್ದಾರೆ. ಇದನ್ನು ಯಾರೋ ಕಿಡಿಗೇಡಿಗಳು ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಾಗ ನಮ್ಮ ಪೊಲೀಸ್ ತಂಡ ಹಾಸ್ಟೆಲ್‌ಗೆ ತೆರಳಿದೆ ಎಂದು ಮಹಾಸಮುಂದ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ರಾವ್ ತಿಳಿಸಿದ್ದಾರೆ. ಸದ್ದು ಬರುತ್ತಿದ್ದ ಆವರಣದಲ್ಲಿ ಕೇವಲ 5-6 ವಿದ್ಯಾರ್ಥಿಗಳಿದ್ದರು. ಆದಾಗ್ಯೂ ಆ ಕೋಣೆಯಲ್ಲಿ ಟಿವಿ ಮತ್ತು ಸ್ಪೀಕರ್ ಇತ್ತು. ಅವುಗಳನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಲು ಸಾಧ್ಯವಿದೆ ಎಂದಿದ್ದಾರೆ. Ye Mera #India… Yaha Ghost Bhi Dost hota hai…Ghost in the Boys Hostel of the #Medical College of @MahasamundDist! The sound of a girl's laugh is heard. Police reached to investigate was surprised… #Chhattisgarh watch this Video 👇 pic.twitter.com/7zUC4PssLN — Vijay kumar🇮🇳 (@vijaykumar1305) May 9, 2023