ಕೆನಡಾದ ಓಂಟಾರಿಯೋದಲ್ಲಿರುವ ಡಂಡಾಸ್ ಪರ್ವತ ಸುತ್ತಾಡಲು ಹೊರಟ ಒಬ್ಬ ವ್ಯಕ್ತಿ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವ್ಯಕ್ತಿ ತೆಗೆದ ಫೋಟೋ ಅಷ್ಟು ವೈರಲ್ ಆಗಲು ಕಾರಣ ಕ್ಯಾಮರಾದಲ್ಲಿ ಸೆರೆ ಸಿಕ್ಕ ಭೂತ.
ರೆಡಿಟ್ ಯೂಸರ್, ಕೆನಡಾದ ಓಂಟಾರಿಯೋದಲ್ಲಿರುವ ಡಂಡಾಸ್ ಪರ್ವತಕ್ಕೆ ಗೆಳೆಯರ ಜೊತೆ ಸುತ್ತಾಡಲು ಹೋಗುತ್ತಾನೆ. ಅಲ್ಲಿ ಅವನು ಪರ್ವತದ ತುದಿಯಲ್ಲಿ ಕುಳಿತ ಗೆಳೆಯನ ಕಸಿನ್ ಫೋಟೋ ತೆಗೆಯುತ್ತಾನೆ. ನಂತರ ಕ್ಲಿಕ್ಕಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ ಅದರಲ್ಲಿನ ಒಂದು ಫೋಟೋದಲ್ಲಿ ಮಹಿಳೆಯ ಭೂತ ಸೆರೆಯಾಗಿತ್ತು. ಆ ಆಕೃತಿ ಪರ್ವತಗಳ ದುರ್ಗಮ ಜಾಗದಲ್ಲಿ ನಿಂತಿದ್ದು ಚಿತ್ರದಲ್ಲಿ ಕಂಡಿದೆ. ಆ ಸ್ಥಳ ಎಷ್ಟು ದುರ್ಗಮವಾಗಿದೆ ಎಂದರೆ ಅಲ್ಲಿ ಯಾವ ಮನುಷ್ಯನೂ ಹೋಗಲು ಸಾಧ್ಯವಿಲ್ಲ.
ಮನೆಯಲ್ಲೇ ಕುಳಿತು ಸ್ಮಾರ್ಟ್ಫೋನ್ ಮೂಲಕ ಗಳಿಸಿ ಸಾವಿರಾರು ರೂ.
ಈ ಫೋಟೋವನ್ನು ನೋಡಿದ ತಕ್ಷಣ ಹಲವಾರು ರೆಡಿಟ್ ಬಳಕೆದಾರರು ಆ ಪರ್ವತಕ್ಕೆ ಹೋಗುವ ಹಲವಾರು ಜನರು ಕಣ್ಮರೆಯಾಗಿದ್ದಾರೆ ಎಂದು ಹೇಳಿದ್ದಾರೆ. ಅವರ ಮಾತು ಕೇಳಿದ ಆತ ಮತ್ತೆ ಅದೇ ಸ್ಥಳಕ್ಕೆ ಭೇಟಿ ನೀಡಿದ. ಆಗ ಅಲ್ಲಿ ನಡೆದ ಘಟನೆ ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ.
ಈತ, ಗೆಳೆಯನ ಕಸಿನ್ ಕುಳಿತ ಜಾಗಕ್ಕೆ ಹೋಗಿ ನೋಡಿದಾಗ ಆ ಸ್ಥಳದಲ್ಲಿ ಹುಂಡೈ ಎಲೆಕ್ಟ್ರಾ ಕಾರಿನ ಕೀ ಸಿಕ್ಕಿತು. ಅಲ್ಲಿಂದ ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ಅಲ್ಲಿ ಹುಂಡೈ ಎಲೆಕ್ಟ್ರಾ ಕಾರು ನಿಂತಿರುವುದು ಕಂಡುಬಂತು. ಇದನ್ನು ನೋಡಿದ ರೆಡಿಟ್ ಯೂಸರ್ ಭಯವಾಗಿ ಕೀಯನ್ನು ಕಾರಿನ ಮೇಲೇ ಇಟ್ಟು ಅಲ್ಲಿಂದ ಓಡಿಬಂದಿದ್ದಾನೆ. ಹೀಗೆ ಮನೆಗೆ ಬಂದು ಟಿವಿ ನೋಡಿದಾಗ ಟಿವಿಯಲ್ಲಿ ಕಾಣೆಯಾದ ಮಹಿಳೆ ಮತ್ತು ಅದೇ ಕಾರಿನ ಸುದ್ದಿ ಬರುತ್ತಿತ್ತು.