ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ತಾಯಿಯೊಬ್ಬರು ಮೊಬೈಲ್‌ನಲ್ಲಿ ಮಾತನಾಡುತ್ತಾ ಮಗುವನ್ನೇ ಮರೆತು ಹೋಗಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋದಲ್ಲಿ, ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ತಮ್ಮ ಸುತ್ತಲಿನ ಅರಿವಿಲ್ಲದೆ ನಡೆಯುತ್ತಿರುವುದು ಕಂಡುಬರುತ್ತದೆ. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿ ಚಿಕ್ಕ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಆಕೆಯ ಹಿಂದೆ ಓಡುತ್ತಾ ಕರೆದೊಯ್ಯುತ್ತಿರುವುದು ಕಾಣಿಸುತ್ತದೆ. ಅಂತಿಮವಾಗಿ ಆತ ಮಹಿಳೆಯನ್ನು ಹಿಡಿದು ಮಗುವನ್ನು ಆಕೆಯ ಕೈಗೆ ನೀಡುತ್ತಾನೆ. ಆಗ ಮಹಿಳೆ ತಾನು ಮಗುವನ್ನು ಅಂಗಡಿಯಲ್ಲಿ ಮರೆತಿದ್ದೆ ಎಂದು ಅರಿತುಕೊಳ್ಳುತ್ತಾಳೆ. ಈ ವಿಡಿಯೋ ಸಾವಿರಾರು ಲೈಕ್‌ಗಳು ಮತ್ತು ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಈ ಘಟನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಫೋನ್ ಅಷ್ಟು ಮುಖ್ಯವಲ್ಲ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಇದೆಲ್ಲಾ ಏನು ನೋಡಬೇಕಾಗಿದೆ, ಮದುವೆ ಆಗದೇ ಇರುವುದು ಒಳ್ಳೆಯದಾಯಿತು” ಎಂದು ಇನ್ನೊಬ್ಬರು ಬರೆದಿದ್ದಾರೆ. ಇಂತಹ ಘಟನೆಗಳು ಮಾನವೀಯತೆಯನ್ನು ಮರೆಸುವ ಕಲಿಯುಗದ ಕರಾಳತೆಯನ್ನು ತೋರಿಸುತ್ತಿವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ.
घोर कलयुग 😂😂 pic.twitter.com/KoFP7PIZuL
— Kattappa (@kattappa_12) March 4, 2025