ಉತ್ತರ ಭಾರತದ ಮದುವೆಗಳಲ್ಲಿ ವರನ ಮೆರವಣಿಗೆ ವೇಳೆ ಮದುವೆ ಗಂಡನ್ನು ಕುದುರೆ ಮೇಲೆ ಕರೆತರುವ ಸಂಪ್ರದಾಯವಿದೆ. ಬಾರಾತ್ ಮೆರವಣಿಗೆ ಎಂದು ಕರೆಯಲ್ಪಡುವ ಈ ಶಾಸ್ತ್ರದ ವೇಳೆ ಮದುವೆ ಗಂಡು ಕುದುರೆ ಮೇಲೆ ಕುಳಿತು ಬರುವಾಗ ಆತನ ಬಳಗದ ಮಂದಿ ಸಂಭ್ರಮದಲ್ಲಿ ಕುಣಿಯುತ್ತಾ ಮುಂದೆ ಸಾಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬಾರಿ ಮದುಮಗನನ್ನು ಕಾರಿನಲ್ಲಿ ಮೆರವಣಿಗೆ ಮಾಡಿಕೊಂಡು ಕರೆದೊಯ್ಯಲಾಗುತ್ತದೆ. ಆದರೆ ಮದುವೆ ಮನೆ ತಲುಪಲು ಮೆರವಣಿಗೆಯಲ್ಲಿ ಹೋಗುವ ವೇಳೆ ಮತ್ತೊಬ್ಬ ವ್ಯಕ್ತಿಯ ಹೆಗಲ ಮೇಲೆ ಗಂಡು ಕೂರುವುದನ್ನು ಎಲ್ಲಾದರೂ ಕೇಳಿದ್ದೀರಾ?
ಅನಸ್ತೇಷಿಯಾ ತೆಗೆದುಕೊಳ್ಳದೇ ಐದು ಕೆಜಿ ಮಗುವಿಗೆ ಜನ್ಮವಿತ್ತ ಮಾತೆ
ತನ್ನ ಸ್ನೇಹಿತನ ತೋಳಿನ ಮೇಲೆ ಕುಳಿತು ಮದುವೆ ಮನೆಗೆ ಮೆರವಣಿಗೆಯಲ್ಲಿ ಹೊರಟಿರುವ ಮದುಮಗನೊಬ್ಬನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬರಾತಿಗಳಾಗಿ ಒಂದಷ್ಟು ಮಕ್ಕಳು ನೃತ್ಯ ಮಾಡುವುದನ್ನೂ ಸಹ ನೋಡಬಹುದಾಗಿದೆ.
https://www.youtube.com/watch?v=HzGmIGusE5Y