ಹೈದರಾಬಾದ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.
ಬಿಜೆಪಿ 29, ತೆಲಂಗಾಣ ರಾಷ್ಟ್ರ ಸಮಿತಿ(ಟಿ.ಆರ್.ಎಸ್.) 8, ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆರಂಭಿಕ ಹಂತದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಪಾಲಿಕೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು. ಬಿಜೆಪಿ ಮಹಾನಗರ ಪಾಲಿಕೆ ಅಧಿಕಾರ ಹಿಡಿದರೆ ಹೈದರಾಬಾದ್ ಗೆ ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಲಾಗಿದೆ.
ಒಟ್ಟು 150 ವಾರ್ಡ್ ಗಳಲ್ಲಿ ಬಿಜೆಪಿ 29 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. 2016 ರಲ್ಲಿ ಟಿ.ಆರ್.ಎಸ್. 99 ಸ್ಥಾನ ಗಳಿಸಿ ಅಧಿಕಾಕ್ಕೆ ಬಂದಿತ್ತು. ಬಿಜೆಪಿ ಕೇವಲ 4 ವಾರ್ಡ್ ಗಳಲ್ಲಿ ಜಯಗಳಿಸಿದರೆ, ಎಐಎಂಐಎಂ 44 ವಾರ್ಡ್ ಗಳಲ್ಲಿ, ಇತರರು 2 ವಾರ್ಡ್ ಗಳಲ್ಲಿ ಜಯಗಳಿಸಿದ್ದರು. ಸಮೀಕ್ಷೆಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನಲಾಗಿದ್ದು, ಸಮೀಕ್ಷೆಯೇ ಸತ್ಯವಲ್ಲ. ಅದು ಆಯಾ ಪರಿಸ್ಥಿತಿ, ಸಂದರ್ಭ ಆಧರಿಸಿರುತ್ತದೆ. ನಿಖರವಾದ ಫಲಿತಾಂಶಕ್ಕಾಗಿ ಮಧ್ಯಾಹ್ನದವರೆಗೆ ಕಾಯಬೇಕಿದೆ ಎನ್ನಲಾಗಿದೆ.
ಎಲ್ಲ 30 ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಬೆಳಿಗ್ಗೆ 11 ಗಂಟೆಯ ಒಳಗೆ ಫಲಿತಾಂಶದ ಚಿತ್ರಣ ಸಿಗಬಹುದೆಂದು ಹೇಳಲಾಗಿದೆ. ಹೈದರಾಬಾದ್ ವ್ಯಾಪ್ತಿಯಲ್ಲಿ 25 ವಿಧಾನಸಭಾ ಕ್ಷೇತ್ರಗಳು, 4 ಲೋಕಸಭಾ ಕ್ಷೇತ್ರಗಳಿದ್ದು, ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ಬಿಜೆಪಿ ನಡುವಿನ ಪ್ರತಿಷ್ಠಿತ ಯುದ್ಧವಾಗಿ ಮಾರ್ಪಟ್ಟಿದೆ.