ನಮ್ಮ ದೇಹದ ರೋಗ ನಿರೋಧಕಶಕ್ತಿ ಉತ್ತಮವಾಗಿದ್ದರೆ ಖಾಯಿಲೆಗಳಿಂದ ದೂರವಿರಬಹುದು. ಉತ್ತಮ ಆರೋಗ್ಯಕ್ಕಾಗಿ ಬಹಳಷ್ಟು ಖರ್ಚು ಮಾಡುತ್ತೇವೆ. ಆದರೆ ಕಡಿಮೆ ಖರ್ಚಿನಲ್ಲಿ ಕೇವಲ ಬೆಲ್ಲ ತುಪ್ಪ ಬಳಸಿ ಬಹಳಷ್ಟು ರೋಗಗಳಿಂದ ದೂರವಿರಬಹುದು.
ತುಪ್ಪ ಮತ್ತು ಬೆಲ್ಲದ ಮಿಶ್ರಣವು ಸೂಪರ್ಫುಡ್‌ನಂತೆ ಕೆಲಸ ಮಾಡುತ್ತದೆ. ಬೆಲ್ಲವು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ, ಸಿ ಯಂತಹ ಅನೇಕ ಪೋಷಕಾಂಶಗಳನ್ನು ಹೊಂದಿದೆ.
ದೇಸಿ ತುಪ್ಪದಲ್ಲಿ ವಿಟಮಿನ್ ಎ, ಕೆ, ಇ ಮತ್ತು ಡಿ ಇದೆ. ಇದು ಚರ್ಮ ಮತ್ತು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ಅನೇಕ ಸಮಸ್ಯೆಗಳನ್ನು ನಿವಾರಿಸಲು ತುಪ್ಪ ಮತ್ತು ಬೆಲ್ಲವನ್ನು ತಿನ್ನುವುದು ಪುರಾತನ ಕಾಲದಿಂದಲೂ ಬಳಸಿಕೊಂಡು ಬಂದ ಆಯುರ್ವೇದ ಪದ್ದತಿಯಾಗಿದೆ.
ಇದನ್ನು ಊಟದ ನಂತರವೂ ಸೇವಿಸಬಹುದು. ಒಂದು ಚಮಚ ದೇಸಿ ತುಪ್ಪವನ್ನು ತೆಗೆದುಕೊಂಡು ಅದರಲ್ಲಿ ಒಂದು ಸಣ್ಣ ತುಂಡು ಬೆಲ್ಲವನ್ನು ಬೆರೆಸಿ, ಐದರಿಂದ ಹತ್ತು ನಿಮಿಷಗಳ ನಂತರ ತಿನ್ನಿರಿ. ಇದು, ಚರ್ಮ ಮತ್ತು ಕೂದಲಿಗೆ ಸಂಪೂರ್ಣ ಪೋಷಣೆಯನ್ನು ನೀಡುತ್ತದೆ. ತುಪ್ಪ ಮತ್ತು ಬೆಲ್ಲದ ಮಿಶ್ರಣ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಯಲ್ಲಿ, ದೇಹದಲ್ಲಿನ ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ದೇಹದಲ್ಲಿನ ವಿಷವನ್ನು ಹೊರಹಾಕುವುದಲ್ಲದೆ, ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ವಿಶೇಷ ಪಾತ್ರವನ್ನು ವಹಿಸುತ್ತದೆ.