alex Certify ಪತಿ ತನ್ನನ್ನು ಸಹೋದರಿಯಂತೆ ನೋಡ್ತಾನೆ…..! ಠಾಣೆ ಮೆಟ್ಟಿಲೇರಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತಿ ತನ್ನನ್ನು ಸಹೋದರಿಯಂತೆ ನೋಡ್ತಾನೆ…..! ಠಾಣೆ ಮೆಟ್ಟಿಲೇರಿದ ಪತ್ನಿ

ದೆಹಲಿ ಸಮೀಪದ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಎಂಜಿನಿಯರ್ ಪತಿ ವಿರುದ್ಧ ಪತ್ನಿಯೊಬ್ಬಳು ದೂರು ನೀಡಿದ್ದಾಳೆ. ಪತಿ, ತನ್ನನ್ನು ಸಹೋದರಿಯಂತೆ ನೋಡ್ತಾನೆಂದು ಪತ್ನಿ ದೂರಿನಲ್ಲಿ ಹೇಳಿದ್ದಾಳೆ. ಮನೆಯಲ್ಲಿ ತನ್ನನ್ನು ಸಹೋದರಿಂತೆ ನೋಡುವ ಪತಿ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ಮನೆಯಿಂದ ಹೊರಗೆ ಹಾಕುವ ಬೆದರಿಕೆ ಹಾಕ್ತಾನೆಂದು ಮಹಿಳೆ ಆರೋಪಿಸಿದ್ದಾಳೆ. ಪತಿ-ಪತ್ನಿಗೆ ಕೌನ್ಸಿಲಿಂಗ್ ನಡೆಸಲು ಮುಂದಾದ ಪೊಲೀಸರು, ಪ್ರಕರಣವನ್ನು ಮಹಿಳಾ ಠಾಣೆಗೆ ವರ್ಗಾವಣೆ ಮಾಡಿದ್ದಾರೆ.

ಇಬ್ಬರು ಮದುವೆಯಾಗಿ 14 ವರ್ಷ ಕಳೆದಿದೆ. ಪತಿ, ದೊಡ್ಡ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾನಂತೆ. ಪತ್ನಿಯ ಜೊತೆ ಸಂಬಂಧ ಬೆಳೆಸಲು ನಿರಾಕರಿಸುತ್ತಿರುವ ಪತಿ, ಸಹೋದರನಂತೆ ನೋಡು ಎನ್ನುತ್ತಾನಂತೆ. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ರೆ ಬೆದರಿಕೆ ಹಾಕ್ತಾನಂತೆ. ಆತ ಮಕ್ಕಳ ಮಾತನ್ನೂ ಕೇಳ್ತಿಲ್ಲ ಎಂದು ಮಹಿಳೆ ದೂರಿದ್ದಾಳೆ.

ಪತಿಯ ಈ ಮನಸ್ಥಿತಿಗೆ ಆತನ ಅಕ್ರಮ ಸಂಬಂಧ ಕಾರಣವೆಂದು ಮಹಿಳೆ ದೂರಿದ್ದಾಳೆ. ಪತಿ ಅಕ್ರಮ ಸಂಬಂಧ ಹೊರ ಬರ್ತಿದ್ದಂತೆ ವಿಚಲಿತಳಾದ ಪತ್ನಿ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೌನ್ಸಿಲಿಂಗ್ ನಡೆಸಲಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...