ಬಿಸಿಲಿನ ದಿನದಲ್ಲಿ ಕೆಲಸದ ಮೇಲೆ ಓಡಾಡಿ ಸುಸ್ತಾದ ವೇಳೆ ಕಬ್ಬಿನ ರಸದ ಗಾಡಿ ಸಿಕ್ಕಲ್ಲಿ ಒಂದು ಲೋಟ ಕುಡಿಯುವ ಆಸೆಯಾಗುವುದು ಸಹಜ ಅಲ್ಲವೇ?
ಗಾಜಿಯಾಬಾದ್ ನಲ್ಲಿ ಕಬ್ಬಿನ ರಸದ ಗಾಡಿಯೊಂದನ್ನು ಇಟ್ಟುಕೊಂಡಿರುವ ಯುವಕನೊಬ್ಬ ವಿಶಿಷ್ಟವಾದ ಜ್ಯೂಸ್ ಒಂದನ್ನು ಅನ್ವೇಷಿಸಿದ್ದಾರೆ. ಬೀಟ್ರೂಟ್ನ ತುಂಡುಗಳನ್ನು ಅರೆಯುವ ಈತ, ಅದನ್ನು ಕಬ್ಬಿನ ರಸದೊಂದಿಗೆ ಬೆರೆಸಿ ರಕ್ತದಂತೆ ಕೆಂಪಾಗಿ ಕಾಣುವ ಪೇಯವನ್ನು ಮಾರುತ್ತಾರೆ.
ಮಾರುತಿ ಸುಜ಼ುಕಿ ಮಾಲೀಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
ಫುಡ್ ಬ್ಲಾಗರ್ ವಿಶಾಲ್ ಹಂಚಿಕೊಂಡ ಈ ವಿಡಿಯೋ ಪೋಸ್ಟ್ ಆದ 22 ಗಂಟೆಗಳಲ್ಲಿ 74,000 ವೀಕ್ಷಣೆಗಳನ್ನು ಕಂಡಿದೆ.
’ರಕ್ತದ ಕಬ್ಬಿನ ರಸ’ ಎಂದು ಕರೆಯಲ್ಪಡುವ ಈ ಜ್ಯೂಸ್ ಮಾಡುವ ವೇಳೆ ಬೀಟ್ರೂಟ್ ಸಾರದೊಂದಿಗೆ, ಪುದೀನಾ ಹಾಗೂ ನಿಂಬೇಹಣ್ಣಿನ ರಸವನ್ನೂ ಬೆರೆಸಿ ನೀಡುತ್ತಾರೆ ಈ ವ್ಯಾಪಾರಿ.